ಪಾಕಿಸ್ತಾನಕ್ಕೆ ತಾಲಿಬಾನ್ ವಾರ್ನಿಂಗ್

ಬುಧವಾರ, 27 ಏಪ್ರಿಲ್ 2022 (20:06 IST)
ನಮ್ಮ ನೆರೆ ರಾಷ್ಟ್ರಗಳು ಸೇರಿ, ಯಾವುದೇ ದೇಶಗಳ ಆಕ್ರಮಣವನ್ನು ನಾವು ಸಹಿಸಿಕೊಳ್ಳುವುದಿಲ್ಲ ಎಂದು ಅಫ್ಘಾನಿಸ್ತಾನದ ಹಾಲಿ ರಕ್ಷಣಾ ಸಚಿವ ಹೇಳಿದ್ದಾರೆ. ಇತ್ತೀಚೆಗೆ ಅಫ್ಘಾನ್ ಮೇಲೆ ಪಾಕಿಸ್ತಾನ ಏರ್​​ಸ್ಟ್ರೈಕ್ನಡೆಸಿದೆ. ಈ ವೈಮಾನಿಕ ದಾಳಿಯಲ್ಲಿ ಕುನಾರ್ & ಖೋಸ್ಟ್​​ ಪ್ರಾಂತ್ಯದಲ್ಲಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಆರೋಪ ಮಾಡಿದೆ. ಪಾಕಿಸ್ತಾನವೇ ನಡೆಸಿದೆ ಎನ್ನಲಾದ ಈ ಏರ್​​ಸ್ಟ್ರೈಕ್ಬ ಗ್ಗೆ ತಾಲಿಬಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಇದನ್ನೆಲ್ಲ ಸಹಿಸಿಕೊಳ್ಳಲ್ಲ ಎಂದಿದೆ. ಅಲ್ಲದೇ, ಈ ಬಾರಿ ಸುಮ್ಮನೆ ಬಿಟ್ಟಿದ್ದೇವೆ. ನಮ್ಮ ದೇಶದ ಹಿತಾಸಕ್ತಿಗಾಗಿ ಮೌನ ವಹಿಸಿದ್ದೇವೆ..ಆದ್ರೆ, ಮತ್ತೊಂದು ಬಾರಿ ಇಂತಹ ದಾಳಿಯಾದರೆ ಖಂಡಿತ ಸಹಿಸಿಕೊಳ್ಳಲ್ಲವೆಂದು ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ