ಆಫ್ಘಾನಿಸ್ತಾನದಲ್ಲಿ ಬೆಳೆದು ಪಾಕಿಸ್ತಾನ ಮೂಲಕ ಪಂಜಾಬ್ ಗೆ ಟ್ರಕ್ ಮೂಲಕ ಬಂದಿದ್ದ 102 ಕೆಜಿ ತೂಕದ ಹೆರಾಯಿನ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಆಫ್ಘಾನಿಸ್ತಾದಿಂದ ದೆಹಲಿ ಮೂಲದ ಉದ್ಯಮಿಗೆ ತಲುಪಿಸುತ್ತಿದ್ದಾಗ ಅಮೃತಸರದಲ್ಲಿ ಚೆಕ್ ಪೋಸ್ಟ್ ಬಳಿ ತಪಾಸಣೆ ವೇಳೆ ದ್ರವ ರೂಪದಲ್ಲಿದ್ದ ಡ್ರಗ್ಸ್ ಪೊಲೀಸರು ಪತ್ತೆ ಹಚ್ಚಿದ್ದಾರೆ.
2019ರ ಜೂನ್ ನಂತರ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ ಅತೀ ದೊಡ್ಡ ಬೇಟೆಯಾಗಿದೆ. ಈ ಹಿಂದೆ 532.50 ಕೆಜಿ ತೂಕದ ಡ್ರಗ್ಸ್ ಪತ್ತೆಯಾಗಿತ್ತು.
ಟ್ರಕ್ ನಲ್ಲಿ ಅಕ್ರಮವಾಗಿ ಏನನ್ನೋ ಸಾಗಿಸಲಾಗುತ್ತಿದೆ ಎಂಬ ಸುಳಿವಿನ ಮೇರೆಗೆ ತಪಾಸಣೆ ಮಾಡಲಾಯಿತು. ಆದರೆ ಏನೂ ಪತ್ತೆಯಾಗಲಿಲ್ಲ. ನಂತರ ಮರದ ಬೊಂಬಿನೊಳಗೆ ದ್ರವ ರೂಪದಲ್ಲಿ ತುಂಬಲಾಗಿದ್ದ ವಸ್ತುಗಳನ್ನು ಎಕ್ಸ್ ರೇಯಲ್ಲಿ ತಪಾಸಣೆ ಮಾಡಿದಾಗ ಡ್ರಗ್ಸ್ ಪತ್ತೆಯಾಗಿದೆ.