ಬರ್ತಡೇ ದಿನ ತಲವಾರ್ ಹಿಡಿದ್ರು: ಈಗ ಅಂದರ್ ಆದ್ರು!
ಕಲಬುರಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳಾದ ಸೈಯದ್ ಇರ್ಮಾನ್ ನಾಗೂರೆ, ಆಕಾಶ ಜಾಧವ, ಮಜ್ಜುಬಾಯ್ ಇನಾಮದಾರ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಜನೆವರಿ 1 ರಂದು ಜನುಮ ದಿನ ಆಚರಣೆ ವೇಳೆ ತಲವಾರ್ ಕೈ ಯಲ್ಲಿ ಹಿಡಿದು ಪೋಸ್ ಕೊಟ್ಟಿದ್ದರು. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸೈಯದ್ ಇರ್ಮಾನ್ ಬರ್ತ್ಡೇ ಆಚರಣೆ ಹಿನ್ನಲೆ ನಡು ರಸ್ತೆಯಲ್ಲಿ ಕೈಯಲ್ಲಿ ತಲವಾರ್ ಹಿಡಿದು ಸಂಭ್ರಮಿಸಿದ್ದ ಆರೋಪಿಗಳು ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಕಲಬುರಗಿ ಜಿಲ್ಲೆ ಕಮಲಾಪೂರದಲ್ಲಿ ಬರ್ತಡೆ ಆಚರಣೆ ಮಾಡಲಾಗಿತ್ತು.