ಟಾಯ್ಲೆಟ್ ಗೂ ಟ್ಯಾಕ್ಸ್: ಕಾಂಗ್ರೆಸ್ ಸರ್ಕಾರದಿಂದ ಇದೆಂಥಾ ರೂಲ್ಸ್

Krishnaveni K

ಶನಿವಾರ, 5 ಅಕ್ಟೋಬರ್ 2024 (10:49 IST)
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಟಾಯ್ಲೆಟ್ ಗೂ ಟ್ಯಾಕ್ಸ್ ವಿಧಿಸಲಾಗುತ್ತದೆ ಎಂಬ ಸಮಾಚಾರ ಹಬ್ಬಿದ್ದು, ಈ ಬಗ್ಗೆ ಬಿಜೆಪಿ ಭಾರೀ ಟೀಕೆ ಮಾಡಿದೆ. ಆದರೆ ಇದು ಕೇವಲ ರೂಮರ್ ಅಷ್ಟೇ ಎನ್ನಲಾಗಿದೆ.
 

ಹಿಮಾಚಲ ಪ್ರದೇಶದ ಕೆಲವು ನಗರ ಪ್ರದೇಶಗಳಲ್ಲಿರುವ ಮನೆಗಳಲ್ಲಿ ಎಷ್ಟು ಟಾಯ್ಲೆಟ್ ಇದೆಯೋ ಅವುಗಳನ್ನು ಲೆಕ್ಕ ಹಾಕಿ ಅವುಗಳಿಗೆ ತೆರಿಗೆ ವಿಧಿಸಲಾಗುತ್ತದೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಇದರ ಬಗ್ಗೆ ಬಿಜೆಪಿ ಕಡು ಟೀಕೆ ಮಾಡಿತ್ತು. ಇದರ ಬೆನ್ನಲ್ಲೇ ಸಿಎಂ ಸುಖವಿಂದರ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದಲ್ಲಿ ಇಂಥಹ ಯಾವುದೇ ತೆರಿಗೆ ವ್ಯವಸ್ಥೆ ಇಲ್ಲ. ಯಾರೋ ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಸಿಎಂ ಸ್ಪಷ್ಟನೆ ನೀಡಿದರು. ರಾಜ್ಯದಲ್ಲಿರುವ ಪ್ರತಿ ಶೌಚಾಲಯಕ್ಕೆ 25 ರೂ. ತೆರಿಗೆ ವಿಧಿಸಲಾಗುತ್ತದೆ ಎಂದು ವರದಿಗಳು ಕೇಳಿಬಂದಿದ್ದವು. ಇದು ನಾನಾ ರೀತಿಯ ಕಾಮೆಂಟ್ ಗಳಿಗೆ ಕಾರಣವಾಗಿತ್ತು.

ವಿಶೇಷವೆಂದರೆ ಈ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೂಡಾ ಪ್ರತಿಕ್ರಿಯಿಸಿದ್ದರು. ಮೋದಿ ದೇಶದಲ್ಲಿ ಸ್ವಚ್ಛತೆಗಾಗಿ ಟಾಯ್ಲೆಟ್ ಕಟ್ಟಿಸಿಕೊಟ್ಟರು. ಆದರೆ ಕಾಂಗ್ರೆಸ್ ಟಾಯ್ಲೆಟ್ ಮೇಲೂ ತೆರಿಗೆ ವಿಧಿಸುವ ಕೀಳುಮಟ್ಟಕ್ಕಿಳಿದಿದೆ ಎಂದಿದ್ದರು. ಆದರೆ ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಹಿಮಾಚಲಪ್ರದೇಶ ನಿಯಮ ಜಾರಿಗೊಳಿಸದೇ ಇರಲು ತೀರ್ಮಾನಿಸಿತು ಎಂದೂ ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ