ಶಿಮ್ಲಾ: ಕೋರ್ಟ್ ಆದೇಶವನ್ನೂ ಧಿಕ್ಕರಿಸಿ ಮಸೀದಿಗೆ ಕಟ್ಟಡ ಕಟ್ಟಿರುವುದನ್ನು ವಿರೋಧಿಸಿ ನಿನ್ನೆ ಶಿಮ್ಲಾದಲ್ಲಿ ಹಿಂದೂಗಳಿಂದ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಈಗ ಮುಸ್ಲಿಂ ಸಮಿತಿ ಅಕ್ರಮ ಕಟ್ಟಡ ತೆರವುಗೊಳಿಸಲು ಸಮ್ಮತಿಸಿದೆ.
ಇದರೊಂದಿಗೆ ಹಿಮಾಚಲಪ್ರದೇಶದ ಅಕ್ರಮ ಮಸೀದಿ ಕಟ್ಟಡ ವಿವಾದಕ್ಕೆ ತಾತ್ಕಾಲಿಕ ಅಂತ್ಯ ಸಿಕ್ಕಿದೆ. ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ಅಕ್ರಮವಾಗಿ ಮಸೀದಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿತ್ತು. ಇದರ ಬಗ್ಗೆ ಆಕ್ರೋಶಗೊಂಡಿದ್ದ ಹಿಂದೂಗಳು ಭಾರೀ ಪ್ರತಿಭಟನೆ ನಡೆಸಿದ್ದರು.
ನಕ್ಷೆಯ ಪ್ರಕಾರ ಮಸೀದಿ ನಿರ್ಮಾಣವಾಗುತ್ತಿಲ್ಲ. ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಿಂದೂಗಳು ಮುನ್ಸಿಪಾಲಿಟಿಗೆ ದೂರು ನೀಡಿದ್ದರು. ಹಿಂದೂಗಳು ನಿನ್ನೆ ಬೃಹತ್ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
ಇದೀಗ ಹಿಂದೂಗಳ ಹೋರಾಟದ ಬೆನ್ನಲ್ಲೇ ಮುಸ್ಲಿಂ ಸಮಿತಿ ಅಕ್ರಮವಾಗಿ ನಿರ್ಮಿಸಲಾಗಿರುವ ಕಟ್ಟಡದ ಭಾಗವನ್ನು ನಾವೇ ಕೆಡವುತ್ತೇವೆ ಎಂದು ಒಪ್ಪಿಗೆ ಪತ್ರ ನೀಡಿದೆ. ಇದರೊಂದಿಗೆ ಮಸೀದಿ ವಿವಾದಕ್ಕೆ ಸದ್ಯದ ಮಟ್ಟಿಗೆ ಅಂತ್ಯ ಸಿಕ್ಕಿದೆ.