ಹಿಮಾಚಲ ಪ್ರದೇಶ ಬಳಿಕ ಪಂಜಾಬ್ ಗೂ ಆರ್ಥಿಕ ಸಂಕಷ್ಟ: ಫ್ರೀ ಕೊಟ್ಟಿದ್ದರ ಫಲವೇ

Krishnaveni K

ಶುಕ್ರವಾರ, 6 ಸೆಪ್ಟಂಬರ್ 2024 (16:45 IST)
Photo Credit: Facebook
ನವದೆಹಲಿ: ಹಿಮಾಚಲಪ್ರದೇಶದ ಬಳಿಕ ಈಗ ಪಂಜಾಬ್ ನ ಆಪ್ ಸರ್ಕಾರವೂ ಕೈ ಕಾಲಿ ಮಾಡಿಕೊಂಡು ಕೂತಿದೆ. ಪಂಜಾಬ್ ನಲ್ಲೂ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು ಸರ್ಕಾರ ಪೆಟ್ರೋಲ್-ಡೀಸೆಲ್ ದರರ ಏರಿಕೆ ಮಾಡಿದೆ. ಇದೆಲ್ಲಾ ಉಚಿತ ಕೊಡುಗೆಯ ಫಲ ಎನ್ನಲಾಗುತ್ತಿದೆ.

ಸಿಎಂ ಭಗವಂತ್ ಸಿಂಗ್ ಮಾನ್ ನೇತೃತ್ವದ ಆಪ್ ಸರ್ಕಾರ ಪಂಜಾಬ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್  ಹೆಚ್ಚಳ ಮಾಡಿದೆ. ಪರಿಣಾಮ ಇದು ಜನಸಾಮಾನ್ಯರಿಗೆ ದರ ಏರಿಕೆ ಬಿಸಿ ತಟ್ಟಿದೆ. ಪೆಟ್ರೋಲ್ ಪ್ರತೀ ಲೀಟರ್ ಗೆ 61 ಪೈಸೆ, ಡೀಸೆಲ್ ಪ್ರತೀ ಲೀಟರ್ ಗೆ 92 ಪೈಸೆ ಹೆಚ್ಚಳವಾಗಿದೆ.

ಕೆಲವು ದಿನಗಳ ಹಿಂದೆ ಹಿಮಾಚಲ ಪ್ರದೇಶ ಆರ್ಥಿಕವಾಗಿ ದಿವಾಳಿಯಾಗಿರುವ ಕಾರಣ ಕೇಂದ್ರದ ಸಹಾಯ ಕೋರಿತ್ತು. ನೆರೆ ಪರಿಹಾರ ಕೊಡಲೂ ಹಣವಿಲ್ಲವೆಂದು ಕೇಂದ್ರಕ್ಕೆ ದುಂಬಾಲು ಬಿದ್ದಿತ್ತು. ಇದೀಗ ಇಂಡಿಯಾ ಒಕ್ಕೂಟದ ಮತ್ತೊಂದು ಪಕ್ಷ ಆಡಳಿತದಲ್ಲಿರುವ ಪಂಜಾಬ್ ನಲ್ಲೂ ಇದೇ ಗತಿಯಾಗಿದೆ.

ಸರ್ಕಾರಿ ನೌಕರರ ವೇತನವೂ ವಿಳಂಬವಾಗಿದೆ. ಇನ್ನು, ಆಪ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಜ್ಯ ಸರ್ಕಾರ ಆರ್ಥಿಕತೆ ನಿಭಾಯಿಸಲು ವಿಫಲವಾಗಿದೆ. ಎಲ್ಲವೂ ಉಚಿತ ಕೊಡುಗೆಗಳ ಫಲ ಎಂದಿದೆ. ಕೇವಲ ಎರಡೇ ವರ್ಷಗಳಲ್ಲಿ ಆಪ್ ಸರ್ಕಾರ ದಿವಾಳಿಯಾಗಿದೆ ಎಂದು ಅಕಾಲಿ ದಳವೂ ಟೀಕೆ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ