ಶಿಕ್ಷಕರ ದಿನಾಚರಣೆ ಮಾರನೇ ದಿನ: ಶಾಲೆಯಲ್ಲೇ ನೇಣಿಗೆ ಶರಣಾದ ಶಿಕ್ಷಕ
ಶಿಕ್ಷಕ ದಿನಾಚರಣೆಯ ಮಾರನೇ ದಿನವೇ ಶಿಕ್ಷಕನೊಬ್ಬ ಶಾಲೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹುಬ್ಬಳ್ಳಿ ತಾಲೂಕಿನ ಕೊಳಿವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ.
ಚನ್ನಪ್ಪ ತೊಟಗಂಟಿ (42) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ. ಕೊಪ್ಪಳ ಮೂಲದ ಈ ಶಿಕ್ಷಕ ಕಳೆದು ಹತ್ತು ವರ್ಷಗಳಿಂದ ಇದೇ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಬೆಳಗ್ಗೆ ಶಾಲೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಾಲೆಯಲ್ಲಿ ಮಕ್ಕಳು ಕಡಿಮೆ ಇದ್ದಾರೆ ಎಂಬ ಕಾರಣಕ್ಕೆ ಈ ಶಿಕ್ಷಕನನ್ನು ಬೇರೆ ಕಡೆ ವರ್ಗಾವಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಮಾಡಿತ್ತು.
ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.