ಕೂದಲು ಉದುರಿತೆಂದು ಈಕೆ ಮಾಡಿದ ಅನಾಹುತವೇನು ಗೊತ್ತಾ?!

ಸೋಮವಾರ, 3 ಸೆಪ್ಟಂಬರ್ 2018 (09:05 IST)
ಬೆಂಗಳೂರು: ಹೆಣ್ಣಿಗೆ ಕೂದಲೇ ಸೌಂದರ್ಯ. ಹಾಗಂತ ಕೂದಲು ಉದುರಿದರೆ ಅದು ಮರಳಲು ಹಲವು ದಾರಿಗಳಿವೆ. ಆದರೆ ಈ ಹುಡುಗಿ ಮಾಡಿದ ಅನಾಹುತವೇನು ಗೊತ್ತಾ?
 

ಮಡಿಕೇರಿಯ ನಿಟ್ಟೂರಿನಲ್ಲಿ ಯುವತಿಯೊಬ್ಬಳು ಕೂದಲು ಉದುರಿತೆಂದು ಜೀವವನ್ನೇ ಕಳೆದುಕೊಂಡಿದ್ದಾಳೆ! ಹೇರ್ ಸ್ಟ್ರೈಟನಿಂಗ್ ಮಾಡಿಸಿದ ಮೇಲೆ ಕೂದಲು ಸಂಪೂರ್ಣ ಉದುರಿತೆಂದು ಈಕೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ!

ಮೈಸೂರಿನಲ್ಲಿ ಬಿಬಿಎ ಓದುತ್ತಿದ್ದ ಹುಡುಗಿ 19 ವರ್ಷದ ಗಂಗಮ್ಮ ಇಂತಹ ಕೆಲಸ ಮಾಡಿದ ಯುವತಿ. ಕೂದಲು ಉದುರಲು ಪ್ರಾರಂಭವಾದ ಮೇಲೆ ಕಾಲೇಜಿಗೆ ಹೋಗುವುದಿಲ್ಲ ಎಂದು ಈಕೆ ರಂಪಾಟ ಮಾಡಿದ್ದಳಂತೆ. ಆದರೆ ಮನೆಯವರು ಸಮಾಧಾನಿಸಿ ಕಾಲೇಜಿಗೆ ಕಳುಹಿಸಿದ್ದರು. ಆದರೆ ಪಿಜಿಯಲ್ಲಿ ವಾಸ್ತವ್ಯವಿದ್ದ ಈಕೆ ಆ.28 ರಿಂದ ನಾಪತ್ತೆಯಾಗಿದ್ದಳು. ಈ ಸಂಬಂಧ ಪಿಜಿ ಮಾಲಿಕರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಈಕೆಯ ಮೃತದೇಹ ಲಕ್ಷ್ಮಣ ತೀರ್ಥ ನದಿಯಲ್ಲಿ ಪತ್ತೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ