ಸರ್ಕಾರಿ ಶಾಲೆಯಲ್ಲೊಂದು ಪಾಠ ಹೇಳೋ ಶಾಲಾ ಕೊಠಡಿ

ಬುಧವಾರ, 5 ಸೆಪ್ಟಂಬರ್ 2018 (16:50 IST)
ಸಾಮಾನ್ಯವಾಗಿ ಸರ್ಕಾರಿ ಶಾಲೆಗಳು ಅಂದ್ರೆ ನೆನಪಾಗೋದು ಒಡೆದ ಹೆಂಚು, ಮುರಿದ ಕಿಟಕಿ, ಬಿರುಕು ಬಿಟ್ಟ ಗೋಡೆ.  ಆದ್ರೆ ಇಲ್ಲೊಂದು ಶಾಲೆ ಮಾತ್ರ ಅದಕ್ಕೆ ತದ್ವಿರುದ್ಧವಾಗಿ ವಿಶೇಷ ಸೇವೆಗೈಯುತ್ತಿದೆ.

ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಕೂಗಳತೆ ದೂರದಲ್ಲಿರುವ ಬಡಕಂಬಿ ತೋಟದ ಶಾಲೆ ವಿಭಿನ್ನವಾಗಿ ಗಮನ ಸೆಳೆಯುತ್ತಿದೆ.  ಕನ್ನಡ ಪ್ರಾಥಮಿಕ ಕನ್ನಡ ಶಾಲೆಯಲ್ಲಿ  2016-17 ನೇ ಸಾಲಿನಲ್ಲಿ ಈ ಶಾಲೆಗೆ ಹೆಚ್ಚುವರಿ ಒಂದು ಕಟ್ಟಡ ನಿರ್ಮಾ ಮಾಡಲು ಅನುಮತಿ ದೊರೆತಿತ್ತು.  ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರ ಅಶೋಕ ಪೂಜಾರಿ, ಶಿಕ್ಷಣ ಕ್ಷೇತ್ರದಲ್ಲಿ ಎನಾದ್ರು ಒಂದು ಬದಲಾವಣೆ ತರುವ ಕನಸು ಹೊಂದಿದ್ದರು. ಸರ್ಕಾರದಿಂದ ಮಂಜೂರಾದ ಕಟ್ಟಡವನ್ನ ಹೆಚ್ಚಿನ ಮುತುವರ್ಜಿ ವಹಿಸಿ ಶಾಲೆಗೆ ಒಂದು ಹೊ ಭಾಷ್ಯ ಬರೆದ್ರು.

 ಈ ಕನ್ನಡ ಶಾಲೆಯಲ್ಲಿ ಗೋಡೆಯ ಮೇಲೆಲ್ಲಾ ರಾಜ್ಯ, ಜಿಲ್ಲೆ, ತಾಲ್ಲೂಕಿನ ಹೆಸರುಗಳು, ಕಾಲ ಚಕ್ರ, ರಾಷ್ಟ್ರೀಯ ಲಾಂಛನಗಳು, ರಾಷ್ಟ್ರ ಪುರುಷರ ಚಿತ್ರಗಳು,  ಕನ್ನಡದ ವರ್ಣಮಾಲೆ, ಇಂಗ್ಲಿಷ್ ವರ್ಣಮಾಲೆ, ಕನ್ನಡ, ಹಿಂದಿ, ಇಂಗ್ಲೀಷ್, ಮತ್ತು ರೋಮನ್ ಅಕ್ಷರಗಳು. ಒಟ್ಟಾರೆಯಾಗಿ ಈ ಶಾಲೆಯೇ ತೆರೆದಿಟ್ಟ ಪುಸ್ತಕದಂತೆ ಕಾಣಿಸುತ್ತದೆ. ಒಂದೊಮ್ಮೆ ಶಿಕ್ಷಕರು ಕಾರಣಾಂತರಗಳಿಂದ ಶಾಲೆಗೆ ಬರುವದು ವಿಳಂಬವಾದಾಗ ಈ ಶಾಲೆಯ ಗೋಡೆ ಕಿಟಕಿಗಳು ಇಲ್ಲಿನ ಮಕ್ಕಳಿಗೆ ಪಾಠ ಹೇಳುತ್ತವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ