ದಾವಣಗೆರೆಯ ಆರೋಗ್ಯಮಾತೆ ವಿಗ್ರಹದಲ್ಲಿ ಕಣ್ಣೀರಧಾರೆ; ಭಕ್ತರಲ್ಲಿ ಆತಂಕ

ಗುರುವಾರ, 30 ಆಗಸ್ಟ್ 2018 (11:46 IST)
ದಾವಣಗೆರೆ : ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ರೀತಿಯ ವಿಸ್ಮಯಕಾರಿ ಘಟನೆಗಳು  ನಡೆಯುತ್ತಲೇ ಇದ್ದು, ಇದೀಗ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಆರೋಗ್ಯಮಾತೆ ಚರ್ಚ್ ನಲ್ಲಿ  ವಿಸ್ಮಯಕಾರಿ ಘಟನೆಯೊಂದು ಸಂಭವಿಸಿದೆ.


ಹೌದು. ಹರಿಹರ ಪಟ್ಟಣದ ಆರೋಗ್ಯಮಾತೆ ಚರ್ಚ್ ನಲ್ಲಿರುವ ಆರೋಗ್ಯಮಾತೆಯ  ವಿಗ್ರಹದಲ್ಲಿ ಕಣ್ಣಿರು ಬರುತ್ತಿದ್ದು, ಈ ಸುದ್ದಿ ಕೇಳಿ ಇದೀಗ ಹಲವು ಭಕ್ತರ ದಂಡೆ ಚರ್ಚ್ ಗೆ ಆಗಮಿಸುತ್ತಿದೆ. ಅಲ್ಲದೇ ಮಾತೆಗೆ ಕಣ್ಣೀರು ಬರಲು ಕಾರಣವೇನು ಎನ್ನುವ ಗೊಂದಲ ಇದೀಗ  ಭಕ್ತರಲ್ಲಿ ಸೃಷ್ಟಿಯಾಗಿದೆ.


ಹರಿಹರದ ಆರೋಗ್ಯ ಮಾತಾ ಚರ್ಚ್ ಪ್ರಸಿದ್ಧ ಸ್ಥಳವಾಗಿದ್ದು, ಅಲ್ಲಿನ ಮರೀಯಾ ದೇವಿಯ ದರ್ಶನ ಪಡೆಯಲು ಅನೇಕ ಭಕ್ತರು ಆಗಮಿಸುತ್ತಾರೆ. ಆದರೆ ಬುಧವಾರ ಏಕಾಏಕಿ ಮರೀಯಾ ವಿಗ್ರಹದಲ್ಲಿ ಕಣ್ಣಿನಲ್ಲಿ ನೀರು ಬರುತ್ತಿದೆ. ಚರ್ಚ್ ನ ಫಾದರ್ ಬಟ್ಟೆಯಿಂದ ನೀರನ್ನು ಒರೆಸಿದರೂ ಕೂಡ ಮತ್ತೆ ಅದೇ ಭಾಗದಲ್ಲಿ ನೀರು ಹರಿಯಲಾರಂಭಿಸಿದೆ. ಇದನ್ನು ಕಂಡು  ಭಕ್ತರು ಆತಂಕಗೊಂಡಿದ್ದಾರೆ. ತಮ್ಮಿಂದ ಏನೋ ತಪ್ಪಾಗಿದೆ ಆ ತಪ್ಪನ್ನು ಕ್ಷಮಿಸು ಎಂದು ಭಕ್ತರು ಪ್ರತಿಮೆಯ ಮುಂಭಾಗದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ