ಪತ್ನಿಯ ಅಕ್ರಮ ಸಂಬಂಧಕ್ಕೆ ಹುಟ್ಟಿದನೆಂಬ ಅನುಮಾನಕ್ಕೆ ಹಸುಗೂಸನ್ನೇ ಕೊಂದ ತಂದೆ!
17 ವರ್ಷದ ಅಪ್ರಾಪ್ತ ಹುಡುಗ ಕೊಲೆ ಮಾಡಿದ ಪಾಪಿ ತಂದೆ. ಈತ 10 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ. ಪತ್ನಿಯ ಶೀಲ ಶಂಕಿಸಿ ಆತ ಮನೆಯಲ್ಲಿ ಯಾರೂ ಇಲ್ಲದಾಗ ಶನಿವಾರ ಸಂಜೆ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗುವನ್ನು ಹೊಡೆದು ಸಾಯಿಸಿದ ಬಳಿಕ ಆರೋಪಿ ನಾಪತ್ತೆಯಾಗಿದ್ದ. ಬಳಿಕ ನಿಸ್ತೇಜವಾಗಿ ಮಲಗಿದ್ದ ಮಗುವನ್ನು ಕಂಡು ಸಂಶಯಗೊಂಡ ತಾಯಿ ಪೊಲೀಸರ ಬಳಿಗೆ ಮಗುವಿನ ಸಮೇತ ಬಂದಿದ್ದಾಳೆ. ಈ ವೇಳೆ ಮಗು ಮೃತಪಟ್ಟಿರುವುದು ಖಚಿತವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.