ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸದ್ಯದಲ್ಲೇ ಗಾಯಕಿ ಸಿವಶ್ರೀ ಸ್ಕಂದ ಪ್ರಸಾದ್ ಜೊತೆ ಮದುವೆಯಾಗಲಿದ್ದಾರೆ ಎಂದು ಸುದ್ದಿಯಾಗಿತ್ತು. ಇದೀಗ ಮೊದಲ ಬಾರಿಗೆ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿರುವ ತೇಜಸ್ವಿ ಸೂರ್ಯ ಇದೇ ಮಾರ್ಚ್ ನಲ್ಲಿ ಚೆನ್ನೈ ಮೂಲದ ಗಾಯಕಿ, ಭರತನಾಟ್ಯ ನೃತ್ಯ ಕಲಾವಿದೆ ಸ್ಕಂದ ಶ್ರೀ ಜೊತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಭಾರೀ ವೈರಲ್ ಆಗಿತ್ತು. ಆದರೆ ಇಬ್ಬರೂ ಈ ಬಗ್ಗೆ ತುಟಿಪಿಟಕ್ ಎಂದಿರಲಿಲ್ಲ.
ಆದರೆ ಈಗ ಇಬ್ಬರೂ ಜೊತೆಗಿರುವ ವಿಡಿಯೋವೊಂದು ವೈರಲ್ ಆಗಿದೆ. ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಜಪತೆಯಾಗಿ ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲ, ಇಬ್ಬರೂ ಜೊತೆಯಾಗಿ ಹೋಗಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.
ಹೀಗಾಗಿ ತೇಜಸ್ವಿ ಮತ್ತು ಸಿವಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ಪಕ್ಕಾ ಆಗಿದೆ. ಇಬ್ಬರನ್ನೂ ಜೊತೆಯಾಗಿ ನೋಡಿದ ನೆಟ್ಟಿಗರು ನಿಮ್ಮಿಬ್ಬರ ಜೋಡಿ ಚೆನ್ನಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಅಧಿಕೃತವಾಗಿ ನಿಮ್ಮ ಮದುವೆ ಸುದ್ದಿ ಕೊಡಿ ಎಂದು ಡಿಮ್ಯಾಂಡ್ ಮಾಡಿದ್ದಾರೆ.
Bengaluru, Karnataka: BJP MP Tejasvi Surya and classical singer Sivasri Skandaprasad were spotted taking blessings from Sri Sri Ravi Shankar at the Art of Living Ashram pic.twitter.com/dJTff1oPWc