ಬಿಜೆಪಿ ಬಿಟ್ಟಿದ್ದ ತೇಜಸ್ವಿನಿ ಗೌಡ ಕಾಂಗ್ರೆಸ್ ಗೆ ಸೇರ್ಪಡೆ
ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸಮ್ಮುಖದಲ್ಲಿ ತೇಜಸ್ವಿನಿ ಪಕ್ಷಕಕ್ಕೆ ಸೇರ್ಪಡೆಯಾದರು. ಕೆಲವು ದಿನಗಳ ಹಿಂದಷ್ಟೇ ಅವರು ತಮ್ಮ ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಚುನಾವಣೆ ಸಮಯದಲ್ಲಿ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ವಲಸೆ ಹೋಗುವುದು ಸಾಮಾನ್ಯ.
2004 ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರನ್ನೇ ಸೋಲಿಸಿ ತೇಜಸ್ವಿನಿ ಗೌಡ ಸಂಚಲನ ಮೂಡಿಸಿದ್ದರು. ಆಗ ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆದ್ದಿದ್ದರು. ಅದಾದ ಬಳಿಕ ಕಳೆದ 10 ವರ್ಷಗಳಿಂದ ಬಿಜೆಪಿಯಲ್ಲಿ ಕೆಲಸ ಮಾಡಿದ್ದಾರೆ. ಬಿಜೆಪಿ ಅವರಿಗೆ ಎಂಎಲ್ ಸಿ ಸ್ಥಾನವನ್ನೂ ನೀಡಿತ್ತು.
ಇದೀಗ ತಮ್ಮ ಎಂಎಲ್ ಸಿ ಸ್ಥಾನ ಮತ್ತು ಬಿಜೆಪಿ ಪಕ್ಷಕ್ಕೆ ಗುಡ್ ಬೈ ಹೇಳಿ ಮರಳಿ ಕಾಂಗ್ರೆಸ್ ಗೇ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಘರ್ ವಾಪಸಿ ಮಾಡಿದ್ದಾರೆ. ಇದೀಗ ಕಾಂಗ್ರೆಸ್ ನಲ್ಲಿ ಅವರ ನಿರೀಕ್ಷೆಗಳೇನು ಎಂಬುದು ತಿಳಿದುಬಂದಿಲ್ಲ.