ರಾಜ್ಯ ಕಾಂಗ್ರೆಸ್‌ನಲ್ಲಿ ಟೆನ್ಶನ್ ಜೋರು

ಮಂಗಳವಾರ, 28 ಫೆಬ್ರವರಿ 2023 (10:17 IST)
ಬೆಂಗಳೂರು : ರಾಜ್ಯ ಕಾಂಗ್ರೆಸ್ನಲ್ಲಿ 90 ವರ್ಷ ತುಂಬಿದ ಇಬ್ಬರು ಹಿರಿಯ ನಾಯಕರು ಟಿಕೆಟ್ಗಾಗಿ ಪಟ್ಟು ಹಿಡಿದು ಕುಳಿತಿದ್ದು, ಕೈ ಪಾಳಯಕ್ಕೆ ತಲೆ ನೋವಾಗಿದೆ ಎನ್ನಲಾಗಿದೆ.
 
ಎಷ್ಟೇ ಪ್ರಯತ್ನಿಸಿದರೂ ಮನವೊಲಿಕೆ ಆಗುತ್ತಿಲ್ಲ ಏನು ಮಾಡುವುದು ಎಂಬ ಸಂಕಷ್ಟ ಕೈ ನಾಯಕರಿಗೆ ಎದುರಾಗಿದೆ ಎನ್ನಲಾಗುತ್ತಿದೆ.

90 ವರ್ಷ ಮೀರಿದ ಇಬ್ಬರು ನಾಯಕರು ಈಗಲೂ ತಮಗೆ ಟಿಕೆಟ್ ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ ಎನ್ನಲಾಗಿದೆ. 90 ವರ್ಷ ದಾಟಿರುವ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಹಾಗೂ ಶಾಮನೂರು ಶಿವಶಂಕರಪ್ಪ.

ಒಬ್ಬರದು ನನಗೆ ಇಲ್ಲಾ ನನ್ನ ಮಗಳಿಗೆ ಟಿಕೆಟ್ ಬೇಕು ಎಂಬ ಡಿಮ್ಯಾಂಡ್. ಮಗಳಿಗೆ ಕೊಡದಿದ್ದರೆ ನನಗೆ ಹೊರತು ಬೇರೆಯವರಿಗೆ ಟಿಕೆಟ್ ಕೊಡಬಾರದು. ಇದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪಟ್ಟಾಗಿದ್ದು, ಹಿರಿಯ ನಾಯಕನ ಪಟ್ಟಿಗೆ ಕೈ ನಾಯಕರೇ ತಲೆ ಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ