ರಾಜಕಾಲುವೆ ಒತ್ತುವರಿದಾರಿಗೆ ಶುರುವಾಯ್ತು ಟೆನ್ಷನ್..!

ಶನಿವಾರ, 16 ಡಿಸೆಂಬರ್ 2023 (14:02 IST)
ರಾಜಕಾಲುವೆ ಒತ್ತುವರಿದಾರಿಗೆ ಟೆನ್ಷನ್ ಶುರುವಾಗಿದೆ.ಬಿಬಿಎಂಪಿ ಹಾಗೂ ಕಂದಾಯ ಇಲಾಖೆಯಿಂದ ಕಾರ್ಯಚರಣೆ ನಡರಸಲಾಗಿದ್ದು,ಮಳೆ ಕಡಿಮೆ ಆದ ಬೆನ್ನಲ್ಲೇ ಆಪರೇಷನ್ ಬುಲ್ಡೋಜರ್ ಸಮರಸಾರಲಾಗಿದೆ.ರಾಜಧಾನಿಯ ಕೋಟಿ ಕೋಟಿ ಕುಳಗಳಿಗೆ ಬುಲ್ಡೋಜರ್ ಶಾಕ್ ಫಿಕ್ಸ್ ಆಗಿತ್ತು.ಒತ್ತುವರಿ ಮಾಡಿ ವಿಲ್ಲಾ, ನಿರ್ಮಿಸಿದವರ ಮನೆ ಮೇಲೆ ಬುಲ್ಡೋಜರ್ ನುಗ್ಗಲಿದೆ.ಹೀಗಾಗಿ ರಾಜಕಾಲುವೆ ಒತ್ತುವರಿ ಮಾಡಿ ಐಷರಾಮಿ ವಿಲ್ಲಾ ನಿರ್ಮಿಸಿದವರಿಗೂ ಶಾಕ್ಎದುರಾಗಿದೆ.
 
ಮಹಾದೇವಪುರ ವಲಯ ಹಾಗೂ ಬೊಮ್ಮನಹಳ್ಳಿ ವಲಯದ ಒತ್ತುವರಿ ತೆರವಿಗೆ ವೇಗ ನೀಡಲು ಪಾಲಿಕೆ ಮುಂದಾಗಿದೆ.
ಈಗಾಗಲೇ ರೈನ್ ಬೋ ಡ್ರೈವ್ ಲೇಔಟ್ 13 ವಿಲ್ಲಾಗಳಿಗೆ ನೋಟೀಸ್ ನೀಡಲಾಗಿದೆ.ಒತ್ತುವರಿಯಿಂದ್ಲೇ ವಿಲ್ಲಾ ಅಪಾರ್ಟ್ಮೆಂಟ್ ಗಳಿಗೆ ನೀರು ನುಗ್ಗಿ ಅವಾಂತರ ಉಂಟಾಗಿದೆ.ಹೀಗಾಗಿ ಮತ್ತಷ್ಟು ಕುಳಗಳಿಗೆ ತಹಶಿಲ್ದಾರ್ ನೊಟೀಸ್ ನೀಡಿದ್ದಾರೆ.
 
ತಹಶೀಲ್ದಾರ್ ನೋಟೀಸ್ ಬೆನ್ನಲ್ಲೇ ಮತ್ತಷ್ಟು ಕುಳಗಳಿಗೆ ಟೆನ್ಷನ್ ಶುರುವಾಗಿದೆ.ಮತ್ತಷ್ಟು ಒತ್ತುವರಿ ಕುಳಗಳಿಗೆ ಕಂದಾಯ ಇಲಾಖೆ
ನೊಟೀಸ್ ನೀಡಿದೆ.ಒತ್ತುವರಿ ತೆರವಿಗೆ ವೇಗ ನೀಡುವಂತೆ ಡಿಸಿಎಂ ಡಿಕೆ ಶಿವಕುಮಾರ್ ಬಿಬಿಎಂಪಿ ಕಮಿಷನರ್ ಗೆ ತಾಕೀತು
ಮಾಡಿದ್ದಾರೆ.ಹೀಗಾಗಿ ಎಲ್ಲಾ ಅಧಿಕಾರಿಗಳ ಜೊತೆ ಸಭೆ ನಡೆಸಿ ಒತ್ತುವರಿಗೆ ಬಿಬಿಎಂಪಿ ಕಮಿಷನರ್ ಸೂಚನೆ‌‌ ನೀಡಿದ್ದಾರೆ.
 
ಒತ್ತುವರಿದಾರರ ಲಿಸ್ಟ್
 
ರಾಜಕಾಲುವೆ ಒತ್ತುವರಿ- 3,176
ಈವರೆಗೆ ಒತ್ತುವರಿ ತೆರವು- 2,322
ತೆರವು ಬಾಕಿ- 854
ನ್ಯಾಯಾಲಯದಲ್ಲಿರುವ ಪ್ರಕರಣಗಳು- 155
ಒತ್ತುವರಿ ತೆರವಿಗೆ ಆದೇಶ ಹೊರಡಿಸುವ ಹಂತದಲ್ಲಿರುವ ಪ್ರಕರಣ- 487
 
ತಹಸೀಲ್ದಾರರಿಂದ ಒತ್ತುವರಿ ತೆರವಿಗೆ ನೋಟಿಸ್ ನೀಡಿ 162 ಪ್ರಕರಣ ದಾಖಲಿಸಲಾಗಿದೆ ಎಂದು 
ಬಿಬಿಎಂಪಿ ಆಯುಕ್ತ ತುಷಾರ್ ಗಿರೀನಾಥ್ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ