ಕಾರ್ಪೋರೆಷನ್ ಶಾಲೆಯ ಮತ್ತೊಂದು ದುಸ್ಥಿತಿ ಬಯಲು

ಬುಧವಾರ, 13 ಡಿಸೆಂಬರ್ 2023 (15:41 IST)
ಕಾರ್ಪೋರೆಷನ್ ಶಾಲೆಯ ದುಸ್ಥಿತಿ ಬಯಲಾದ್ರು ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.ಚಿಕ್ಕಪೇಟೆಯ  PS ಲೇನ್ ನಲ್ಲಿರುವ ಕಬಾಡಿ ಗಿಡ್ಡೂಸ ಸೋನುಬಾಯಿ ಕಾರ್ಫೋರೆಷನ್ ಶಾಲೆ ಬಿರುಕು ಬಿಟ್ಟಿದೆ. ಶಾಲೆಯ ಕಾಂಪೌಂಡ್ ಕೂಡ ಬಿರುಕು ಬಿಟ್ಟಿದೆ.ಜೀವ ಕೈಯಲ್ಲಿಹಿಡಿದುಕೊಂಡು ಮಕ್ಕಳು ಪಾಠ ಕೇಳಬೇಕಾದ ಪರಿಸ್ಥಿತಿ ಇದೆ.

ಕ್ಲಾಸ್ ಒಳಗಡೆ ಅಲ್ಲಲ್ಲಿ  ಸೀಲಿಂಗ್  ಬಿದ್ದಿದೆ.ಸೀಲಿಂಗ್ ಕೆಳಗಡೆ ಕೂತು  ಮಕ್ಕಳು ಪಾಠ ಕೇಳಬೇಕಾದ ಪರಿಸ್ಥಿತಿ ಇದೆ.ಈಗ 43 ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಮೊದಲೆ ಮಹಡಿಯಲ್ಲಿ ಬಿಬಿಎಂಪಿ ಪೌರ ಕಾರ್ಮಿಕರಿಗೆ ಕಚೇರಿ ನೀಡಿದ್ದು,ಶಾಲೆಯ ಸುತ್ತಮುತ್ತಲಿನ ಕಾಂಪೌಂಡ್ ಕೂಡ ಕುಸಿದು ಬೀಳೊ ಪರಿಸ್ಥಿತಿ ಇದೆ.ಕಾಂಪೌಂಡ್ ಪಕ್ಕದಲ್ಲೇ ವಾಹನಸವಾರರು  ಗಾಡಿಗಳನ್ನ ಪಾರ್ಕ್‌ ಮಾಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ