67 ಶಾಲೆಗಳ ದುರಸ್ಥಿಗೂ ಕಮಿಟಿಯಿಂದ ಶಿಫಾರಸು ಮಾಡಲಾಗಿದೆ.ಬಿಬಿಎಂಪಿ ನಿರ್ವಾಹಣೆಯಲ್ಲಿರುವ 167 ಶಾಲೆಗಳ ಪೈಕೆ 73 ಶಾಲೆಗಳಷ್ಟೆ ಸೇಫ್ ಆಗಿದೆ.ಉಳಿದ 94 ಶಾಲಾ ಕಟ್ಟಡಗಳಲ್ಲಿ 67 ಶಾಲಾ ಕಟ್ಟಡಗಳನ್ನು ದುರಸ್ಥಿಗೊಳಿಸಲು, ಹಾಗೂ 19 ಶಾಲೆಗಳನ್ನು ಕೆಡವಿ ಮರು ನಿರ್ಮಾಣ ಮಾಡಲು ಇಂಜಿನಿಯರಿಂಗ್ ವಿಭಾಗದಿಂದ ಬಿಬಿಎಂಪಿಗೆ ಶಿಫಾರಸು ಮಾಡಲಾಗಿದೆ.ಪೂರ್ವ ವಲಯದ 12, ಪಶ್ಚಿಮ ವಲಯದ 06, ದಕ್ಷಿಣ ವಲಯದ 01 ಶಾಲೆಗಳು ಶಿಥಿಲಾವಸ್ಥಿಯಲ್ಲಿ ಇದೆ.ಶಿವಾಜಿ ನಗರ ನರ್ಸರಿ ಶಾಲೆ ಕಟ್ಟಡ ಕುಸಿದ ಪ್ರಕರಣದ ನಂತರ ಟೆಕ್ನಲ್ ಕಮಿಟಿಗೆ ರಿಪೋರ್ಟ್ ಕಮಿಷನರ್ ಕೇಳಿದ್ದಾರೆ.
ಕೆಲವು ಶಾಲೆಗಳಲ್ಲಿ ಸಣ್ಣ ಪುಟ್ಟ ದುರಸ್ಥಿ ಕೆಲಸಗಳಿವೆ ಹಾಗೂ ಮೂರು ಆಸ್ಪತ್ರೆಗಳನ್ನು ಸಹ ಮರು ನಿರ್ಮಾಣ ಮಾಡಬೇಕಿದೆ.ತಕ್ಷಣವೇ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಕಾರ್ಯತಂತ್ರ ರೂಪಿಸಿ ಟೆಂಡರ್ ಕರೆಯಲಾಗುವುದು.ಉಳಿದಂತೆ ಬಿಬಿಎಂಪಿಗೆ ಸಂಬಂಧಿಸಿದ ಎಲ್ಲ ಕಟ್ಟಡಗಳ ಕ್ವಾಲಿಟಿ ಬಗ್ಗೆ ಸಹ ರಿಪೋರ್ಟ್ ಕೇಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.