ಬೇಬಿ ಬೆಟ್ಟದಲ್ಲಿ ರಾತ್ರಿ ಎಗ್ಗಿಲ್ಲದೇ ನಡೆಯುತ್ತಿದೆ ಆ ಕೆಲಸ

ಶುಕ್ರವಾರ, 18 ಅಕ್ಟೋಬರ್ 2019 (15:25 IST)
ಪ್ರಸಿದ್ಧ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಆ ಕೆಲಸದಿಂದ ಜನರು ರೋಸಿ ಹೋಗಿದ್ದಾರೆ.

ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹಿಸಿ ಭಾರೀ ಪ್ರತಿಭಟನೆ ನಡೆಸಲಾಗಿದೆ.
ಮಂಡ್ಯದ  ಪಾಂಡವಪುರದ ಬೇಬಿ ಗ್ರಾಮದ ಬೇಬಿ ಬೆಟ್ಟ ಉಳಿಸಿ, ಕೆಆರ್ ಎಸ್ ರಕ್ಷಿಸಿ ಹೋರಾಟ ಸಮಿತಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು.

ರಾತ್ರಿ ವೇಳೆ ಬೇಬಿ ಬೆಟ್ಟದ ಕಾವಲಿನಲ್ಲಿ ಮೆಗ್ಗರ್ ಹಾಗೂ ಬೋರ್ ಬ್ಲಾಸ್ಟ್ ಮೂಲಕ‌ ಬ್ಲಾಸ್ಟ್ ಮಾಡಿ ಗಣಿಗಾರಿಕೆ ನಡೆಸಲಾಗುತ್ತಿದೆ.

ಬೇಬಿ ಬೆಟ್ಟದ ಕಾವಲಿನಲ್ಲಿ ರಾತ್ರಿ 10ಕ್ಕೆ ಕುಳಿ ಹೊಡೆದು ಮಧ್ಯರಾತ್ರಿ 3ಗಂಟೆವರೆಗೆ ಬ್ಲಾಸ್ಟಿಂಗ್ ಮಾಡಲಾಗುತ್ತಿದೆ. ಯಂತ್ರದ ಮೂಲಕ ಕಲ್ಲು ತೆಗೆದು ಬೆಳಗ್ಗೆ 6 ಗಂಟೆಯೊಳಗೆ ಟಿಪ್ಪರ್ ಮೂಲಕ ಸಿ ಫಾರಂ ಇರುವ ಕ್ರಷರ್ ಗಳಿಗೆ ಕಲ್ಲು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಪ್ರತಿಭಟನಾಕಾರರು. ಅಕ್ರಮ ಗಣಿಗಾರಿಕೆಯಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಅಂತ ಪ್ರತಿಭಟನಾಕಾರರು ದೂರಿದ್ದಾರೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ