5 ಕೋಟಿ ಕೊಳ್ಳೆ ಹೊಡೆದ ಪೊಲೀಸನಿಗೆ ಸಿಕ್ಕಿತ್ತು ಪ್ರಶಸ್ತಿ

ಗುರುವಾರ, 17 ಅಕ್ಟೋಬರ್ 2019 (20:15 IST)
ಕೋಟಿ ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿರೋ ಕೇಸ್ ನಲ್ಲಿ ಪೊಲೀಸ್ ಪೇದೆಯೊಬ್ಬ ಭಾಗಿಯಾಗಿರೋ ಪ್ರಕರಣ ನಡೆದಿದೆ.

ಬ್ಯಾಂಕ್ ವೊಂದರಲ್ಲಿ 5 ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದ ಗ್ಯಾಂಗ್ ನಲ್ಲಿ ಭಾಗಿಯಾಗಿದ್ದ ಪೊಲೀಸ್ ನ ಅಕ್ರಮವನ್ನು ಸಿಸಿಟಿವಿ ಫೂಟೇಜ್ ಮೂಲಕ ಹೊರ ಎಳೆಯಲಾಗಿದೆ.

ಕಳ್ಳರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಪೇದೆಗೆ ಆದರ್ಶ ನಗರ ಠಾಣೆಯಲ್ಲಿದ್ದಾಗ ಬೆಸ್ಟ್ ಬೀಟ್ ಕಾನ್‍ಸ್ಟೇಬಲ್ ಪ್ರಶಸ್ತಿ ಬಂದಿತ್ತು ಅಂತ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಹರ್ಯಾಣ ಪೊಲೀಸರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ