ಹುಡುಗಿಗೆ ಭಾರೀ ಮೋಸ : ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ವಂಚನೆ

ಗುರುವಾರ, 17 ಅಕ್ಟೋಬರ್ 2019 (15:57 IST)
ಯುವತಿಯೊಬ್ಬಳಿಗೆ ಭಾರೀ ಮೋಸ ಮಾಡಿ ಹಣ ಎಗರಿಸಿರೋ ಘಟನೆ ನಡೆದಿದೆ.

ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಬ್ಯಾಂಕ್ ಖಾತೆಗೆ ಕೊಟ್ಟಿರುವ ಫೋನ್ ನಂಬರ್ ನ್ನು ಚೆಕ್ ಮಾಡುವ ಸೋಗಿನಲ್ಲಿ ಹಣ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ. ಭವಾನಿನಗರದ ನಿವಾಸಿ ನಿಖಿತಾ ಹಳ್ಯಾಳ ಹಣ ಕಳೆದುಕೊಂಡವರು.

ನಿಖಿತಾಗೆ ಅಪರಿಚಿತ ವ್ಯಕ್ತಿ ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಕರೆ ಮಾಡಿ, ನಿಮ್ಮ ಬ್ಯಾಂಕ್ ಖಾತೆಗೆ ಕೊಟ್ಟಿರುವ ಫೋನ್ ನಂಬರ್ ಸರಿಯಾಗಿದೆಯಾ? ಎಂದು ತಿಳಿದುಕೊಳ್ಳುವದಾಗಿ ಹೇಳಿ ಮೊಬೈಲ್ ಗೆ ಬಂದ ಓಟಿಪಿ ಪಡೆದು ನಿಕಿತಾ ಬ್ಯಾಂಕ್ ಖಾತೆಯಲ್ಲಿದ್ದ 95 ಸಾವಿರ ರೂ.ಗಳನ್ನು ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾನೆ.

ಈ ಕುರಿತು ನಿಖಿತಾ ಹಳ್ಯಾಳ ಹುಬ್ಬಳ್ಳಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ