ಕೆಮ್ಮಿದಾಗ ಎದೆನೋವಾಗುತ್ತಿದ್ದರೆ ಏನರ್ಥ

Krishnaveni K

ಶುಕ್ರವಾರ, 18 ಜುಲೈ 2025 (10:32 IST)
ಇತ್ತೀಚೆಗೆ ಹೃದಯ ಸಂಬಂಧೀ ಖಾಯಿಲೆಗಳ ಬಗ್ಗೆ ಜನರು ಆತಂಕಗೊಂಡಿದ್ದಾರೆ. ಸೈಲೆಂಟಾಗಿ ಹೃದಯಾಘಾತವಾಗುವುದು ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ಬಂದಿರುವುದು ಜನರನ್ನು ಚಿಂತೆಗೀಡು ಮಾಡಿದೆ.
 

ಇದರಿಂದಾಗಿ ಹಲವರು ಹೃದಯ ತಪಾಸಣೆಗೆ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ಸಣ್ಣ ಎದೆನೋವಾಗುತ್ತಿದ್ದರೂ ಹೃದಯ ಕಾಯಿಲೆಯೇನೋ ಎಂದು ಅನುಮಾನಗೊಳ್ಳುತ್ತಿದ್ದಾರೆ. ಕೆಲವರಿಗೆ ಕೆಮ್ಮುವಾಗ ಎದೆನೋವಾಗುತ್ತದೆ. ಇದೂ ಹೃದಯದ ಖಾಯಿಲೆಯ ಲಕ್ಷಣವೇ ಎಂಬ ಆತಂಕವಾಗುತ್ತದೆ.

ಕೆಮ್ಮುವಾಗ ಎದೆನೋವಾಗುವುದಕ್ಕೆ ಹಲವು ಕಾರಣಗಳಿವೆ.

ಮಾಂಸಖಂಡಗಳ ನೋವು: ನಮ್ಮ ಶ್ವಾಸಕೋಶದ ಮಾಂಸಖಂಡಗಳು ತೇಲುವ ಮಾಂಸಖಂಡಗಳಾಗಿರುತ್ತವೆ. ಪದೇ ಪದೇ ಕೆಮ್ಮಿದಾಗ ಇವುಗಳಿಗೆ ಗಾಯಗಳಾಗುವ ಸಾಧ್ಯತೆಯಿರುತ್ತದೆ. ಇದರಿಂದ ಎದೆ ಚುಚ್ಚಿದಂತೆ ನೋವಾಗಬಹುದು.

ಉಸಿರಾಟದ ಸಮಸ್ಯೆ: ಅಸ್ತಮಾ, ಬ್ರಾಂಕೈಟಿಸ್, ನ್ಯುಮೋನಿಯಾದಂತಹ ಉಸಿರಾಟದ ಸಮಸ್ಯೆಯಿಂದಲೂ ಎದೆ ಹಿಂಡಿದಂತೆ ಅನುಭವವಾಗಬಹುದು.

ಒಂದು ವೇಳೆ ಕೆಮ್ಮುವಾಗ ವಿಪರೀತ ಎದೆ ನೋವಾಗುತ್ತಿದ್ದರೆ ಮತ್ತು ಉಸಿರು ಕಟ್ಟಿದಂತಾಗುತ್ತಿದ್ದರೆ ಅದನ್ನು ನಿರ್ಲ್ಯಕ್ಷಿಸದೇ ತಜ್ಞರ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ. ಕೆಮ್ಮಿನ ಜೊತೆ ರಕ್ತ ಬರುತ್ತಿದ್ದರೆ ಶ್ವಾಸಕೋಶ ಸಂಬಂಧೀ ಸಮಸ್ಯೆಯೂ ಆಗಿರಬಹುದು. ಇದನ್ನು ಕಡೆಗಣಿಸಬಾರದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ