ವಿಧಾನಸಭೆ ಅಧಿವೇಶನಕ್ಕೆ ದಿನಗಣನೆ ಆರಂಭ
ವಿಧಾನಸಭೆ ಅಧಿವೇಶನ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಪಾರ್ಲಿಮೆಂಟ್ ಅಧಿವೇಶನ ಹೇಗೆ ನಡೆಯಲಿದೆ ಎನ್ನುವುದರ ಮೇರೆಗೆ ಹೇಗೆ ಅಧಿವೇಶನ ನಡೆಸಬೇಕೆಂಬ ತೀರ್ಮಾನ ಮಾಡಲಾಗುವುದು ಎಂದರು.
ಪ್ರತಿಪಕ್ಷಗಳು ಅಧಿವೇಶನಕ್ಕೆ ಒತ್ತಾಯಿಸಿದರೂ, ಸಂವಿಧಾನ ಬದ್ಧವಾಗಿ ಆರು ತಿಂಗಳ ಒಳಗಾಗಿ ಅಧಿವೇಶನ ಕರೆಯಬೇಕಾಗಿದೆ. ವಿಧಾನಸಭೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಅಧಿವೇಶನ ನಡೆಸಲು ಅವಕಾಶವಿದೆ. ಪಾರ್ಲಿಮೆಂಟ್ ಅಧಿವೇಶನದ ನಂತರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.