ಅನಾಥ ಮಕ್ಕಳ ಆಶ್ರಮದಲ್ಲಿ ಇನ್ಮುಂದೆ ಅದ್ಧೂರಿ ಹುಟ್ಟುಹಬ್ಬ ಆಚರಿಸುವಂತಿಲ್ಲ
ಅನಾಥ ಮಕ್ಕಳ ಆಶ್ರಮಗಳಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬ ಸಂಭ್ರಮಿಸಿಕೊಳ್ಳುವುದಕ್ಕೆ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬ್ರೇಕ್ ಹಾಕಿದೆ.ಇತ್ತೀಚೆಗೆ ರಾಜಕಾರಣಿಗಳು, ಸೆಲೆಬ್ರಿಟಿಗಳು, ಶ್ರೀಮಂತರು ಎಲ್ಲರೂ ತಮ್ಮ ಹಾಗೂ ತಮ್ಮವರ ಹುಟ್ಟುಹಬ್ಬವನ್ನು ಅನಾಥ ಮಕ್ಕಳ ಆಶ್ರಮದಲ್ಲಿ ಆಚರಿಸುತ್ತಿದ್ದಾರೆ. ಆದರೆ ಇನ್ಮುಂದೆ ಈ ರೀತಿ ಮಾಡುವಂತಿಲ್ಲ. ಇನ್ಮುಂದೆ ಇಂತಹ ಆಚರಣೆ ಕಂಡುಬಂದರೆ ಅದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುವುದು.ಬೇರೆಯವರು ಬಂದು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿ ಹೋಗುವುದರಿಂದ ಅನಾಥ ಮಕ್ಕಳಿಗೆ ಅಸಮಾನತೆ ಕಾಡುತ್ತದೆ. ತಾವು ಕೀಳು, ತಮಗೆ ಯಾರೂ ಇಲ್ಲ ಎನ್ನುವ ಭಾವನೆ ಬೆಳೆಯುತ್ತದೆ. ಈ ತಾರತಮ್ಯ ಭಾವನೆಯಿಂದ ಖಿನ್ನತೆ ಕಾಡಬಹುದು. ಈ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಈ ನಿರ್ಧಾರಕ್ಕೆ ಬರಲಾಗಿದೆ.