ಅಂಡಮಾನ್ ಗೆ ಮುಖಂಡರು ಹೋಗಿರೋದು ನಿಜ ಎಂದ ಬಿಜೆಪಿ ಪ್ರಧಾನ ಕಾರ್ಯದರ್ಶಿ
ಸೋಮವಾರ, 20 ಮೇ 2019 (14:56 IST)
ಬಿಜೆಪಿ ರಾಷ್ಟ್ರೀಯ ಸಹ ಸಂಘಟನೆಯ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಬಿಜೆಪಿ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಲಾಬಿ ಮಾಡಲು ತಮ್ಮಅಪ್ತರಾದವರನ್ನು ಅಂಡಮಾನ್ ನಿಕೋಬಾರ್ ಗೆ ಕರೆದುಕೊಂಡು ಹೋಗಿದ್ದಾರೆ. ಅವರು ಅಂಡಮಾನ್ ಗೆ ಹೋಗಿರೋದು ನಿಜ ಅಂತ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್ಸಿ ಎನ್.ರವಿಕುಮಾರ್ ಹೇಳಿದ್ದಾರೆ.
ಸಂಸದ ನಳಿನಕುಮಾರ್ ಕಟಿಲ್, ನಿರ್ಮಲಕುಮಾರ ಸುರಾಣಾ, ಬಾನುಪ್ರಕಾಶ್, ಸಿ.ಟಿ ರವಿ ಸೇರಿದಂತೆ ಹಲವು ಜಿಲ್ಲೆಗಳ ಸಂಘಟನೆಯ ಕಾರ್ಯದರ್ಶಿಗಳನ್ನು ಸುಮಾರು 40 ಜನ ಮುಖ್ಯಸ್ಥರೊಂದಿಗೆ ಅಂಡ್ ಮಾನ್ ನಿಕೊಬಾರ್ ದ್ವೀಪದ ಹ್ಯಾವ್ ಲ್ಯಾಕ್ ಐಲ್ಯಾಂಡ್ ನಲ್ಲಿ ಬಿ.ಎಲ್.ಸಂತೋಷ್ ಇದ್ದಾರೆ ಎನ್ನಲಾಗಿದೆ.
ಅಂಡಮಾನ್ ನಿಕೋಬಾರ್ ಗೆ ಬಿಜೆಪಿ ಪ್ರಮುಖರು ತೆರಳಿರುವುದನ್ನು ಖಚಿತ ಪಡಿಸಿದ್ದಾರೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್. ತಮಿಳುನಾಡು, ಕೇರಳ ರಾಜ್ಯಗಳ ಚುನಾವಣಾ ವಿಶ್ಲೇಷಣೆಗಾಗಿ ಬಿ.ಎಲ್ ಸಂತೋಷ್ ಅವರು ಅಂಡಮಾನ್ ನಲ್ಲಿ ವಿಶೇಷ ಬೈಟೆಕ್ ಕರೆದಿದ್ದಾರೆ.
ಕರ್ನಾಟಕದ ಹೊರಗೆ ಚುನಾವಣಾ ಕಾರ್ಯಗಳಲ್ಲಿ ಭಾಗಿಯಾಗಿದ್ದ ಬಿಜೆಪಿ ಪ್ರಮುಖರು ಬೈಠಕ್ ನಲ್ಲಿ ಭಾಗಿಗುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೂ ಇದಕ್ಕೂ ಸಂಬಂಧವಿಲ್ಲ ಅಂತ ಹೇಳಿದ್ದಾರೆ.