ಬಿಕ್ಷುಕನ ಯಡವಟ್ಟಿಗೆ ಬಂತು ಬಾಂಬ್ ಸ್ಕ್ವಾಡ್

geetha

ಬುಧವಾರ, 14 ಫೆಬ್ರವರಿ 2024 (14:00 IST)
ಬೆಂಗಳೂರು- ನಗರದಲ್ಲಿ ಎಟಿಎಂ ಮೆಷಿನ್ ಬಳಿಯಲ್ಲಿ ಬಿಕ್ಷುಕನ ಆಟದಿಂದ ಪೊಲೀಸರಿಗೆ ತಲೆ‌ನೋವು ಶುರುವಾಗಿತ್ತು.ಬಿಕ್ಷುಕನ ಆಟಕ್ಕೆ ಇಡೀ ಏರಿಯಾನೆ ಹೈ ಅಲರ್ಟ್ ಆಗಿರುವ ಘಟನೆ ಸೋಮವಾರ ರಾತ್ರಿ ಮಿನರ್ವ ಸರ್ಕಲ್ ನಡೆದಿದೆ. ಕೋಟಕ್ ಮಹಿಂದ್ರ ಬ್ಯಾಂಕ್ ನ ಎಟಿಎಂ ಪಕ್ಕದಲ್ಲಿ ಹಣ  ತುಂಬಿಡುವ ಖಾಲಿ ಬಾಕ್ಸ್ ಇಟ್ಟು ಬಿಕ್ಷುಕ ಪರಾರಿಯಾಗಿದ್ದಾನೆ.ಆ ಬಾಕ್ಸ್ ಗಳನ್ನು ಎಟಿಎಂ ಒಳಭಾಗದಲ್ಲಿ ಹಣವನ್ನು ತುಂಬಲು ಉಪಯೋಗ ಮಾಡಲಾಗತ್ತೆ.ಮೂರು ಖಾಲಿ ಬಾಕ್ಸ್ ಗಳನ್ನು ಇಟ್ಟು ಬಿಕ್ಷುಕ ಹೋಗಿದ್ದ ನಂತರ ಅದು ಅನುಮಾನಸ್ಪದವಾಗಿ ಕಂಡು ಬಂದಿತ್ತು‌ತಕ್ಷಣ ಸ್ಥಳಿಯರಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
 
ಒಂದು ಎಟಿಎಂ ನಲ್ಲಿದ್ದ ಹಣವನ್ನು ಕಳ್ಳತನ ಮಾಡಿ ಬಾಕ್ಸ್ ಇಟ್ಟಿರಬೇಕು.ಇಲ್ಲವಾದಲ್ಲಿ ಬಾಕ್ಸ್‌ನಲ್ಲಿ ಏನಾದ್ರು ಅನುಮಾನಾಸ್ಪದ ವಸ್ತುಗಳು ಇತ್ತ ಎಂದು ಭಯ ಹುಟ್ಟಿಹಾಕಿತ್ತು ಇದರಿಂದ ಪೊಲೀಸರು ಫುಲ್ ಅಲರ್ಟ್ ಆಗಿದ್ದರು.ಬಾಂಬ್ ಸ್ಕ್ವಾಡ್ ಬಂದನಂತರದಲ್ಲಿ ಅಲ್ಲಿ ಏನು ಇಲ್ಲ ಎಂಬುದು ಪತ್ತೆಯಾಗಿದೆ ನಂತರ ಬೇರೊಂದು ಎಟಿಎಂ ಬಾಕ್ಸ್ ನಲ್ಲಿದ್ದ ಬಾಕ್ಸ್ ಗಳನ್ನು ಇಲ್ಲಿ ತಂದಿಟ್ಟಿದ್ದಾನೆಂಬುದು ಪತ್ತೆಯಾಗಿದ್ದುಸಿಸಿಟಿವಿಯಲ್ಲಿ ಬಿಕ್ಷುಕನ ಚಲನವಲನ ಪತ್ತೆಯಾಗಿದೆ ಸದ್ಯ ಹಣ ತುಂಬುವ ಬಾಕ್ಸ್‌ ಎಲ್ಲಿಂದ ಬಂತು ಎಂಬುದೆ ದೊಡ್ಡ ಪ್ರಶ್ನೆಯಾಗಿದೆ ಹೀಗಾಗಿ ಆತನಿಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ.ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ