ಕಿವಿಯಲ್ಲಿ ಹೊಡೆದುಕೊಂಡ ಗುಂಡು, ತಲೆಯಲ್ಲಿ ಹೊರಬಂದು ಗರ್ಭಿಣಿಗೆ ತಗುಲೋದಾ

ಭಾನುವಾರ, 24 ಮೇ 2020 (19:33 IST)
ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿ ಕಿವಿಯಲ್ಲಿ ಹೊಡೆದುಕೊಂಡು ಗುಂಡು ತಲೆಯಿಂದ ತೂರಿಬಂದು ಆತನ ಗರ್ಭಿಣಿ ಪತ್ನಿಗೆ ತಗುಲಿದ ಘಟನೆ ನಡೆದಿದೆ.

34 ವರ್ಷದ ವ್ಯಕ್ತಿ ಇದೀಗ ಜೀವನ್ಮರಣದ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದು, ಗರ್ಭಿಣಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ದೆಹಲಿಯಲ್ಲಿ ಈ ಘಟನೆ ನಡೆದಿದೆ. ಕಳೆದ ನಾಲ್ಕೈದು ದಿನಗಳಿಂದ ನಿರುದ್ಯೋಗದ ಸಮಸ್ಯೆ ಕಾರಣದಿಂದ ವ್ಯಕ್ತಿ ಜಿಗುಪ್ಸೆಗೊಂಡಿದ್ದ ಎಂದು ಆತನ ಪತ್ನಿ ತಿಳಿಸಿದ್ದಾಳೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ