ಉಪಚುನಾವಣೆಯ ಹಿನ್ನಲೆ ; ಫಲಿತಾಂಶದ ಬಗ್ಗೆ ಬೆಟ್ಟಿಂಗ್ ಕಟ್ಟಿದ ಕೆಆರ್ ಪೇಟೆ ಜನ

ಶನಿವಾರ, 7 ಡಿಸೆಂಬರ್ 2019 (11:06 IST)
ಮಂಡ್ಯ : ಡಿ.5ರಂದು ನಡೆದ  ಉಪಚುನಾವಣೆಯ ಫಲಿತಾಂಶ ಪ್ರಕಟವಾಗುವ ಮೊದಲೇ ಇದೀಗ ಕೆಆರ್ ಪೇಟೆ ಕ್ಷೇತ್ರದಲ್ಲಿ ಫಲಿತಾಂಶದ ಬಗ್ಗೆ ಬೆಟ್ಟಿಂಗ್ ಹವಾ ಶುರುವಾಗಿದೆ.



ಡಿ.5ರಂದು ನಡೆದ  ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾರಾಯಣಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಬಿ.ಚಂದ್ರಸೇಖರ್, ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ಬಿಎಲ್ ದೇವರಾಜ್ ಸ್ಪರ್ಧಿಸಿದ್ದಾರೆ.ಇದರ ಫಲಿತಾಂಶ ಡಿ.9ರಂದು ಪ್ರಕಟವಾಗಲಿದೆ.


ಆದರೆ ಈ ಮೂವರಲ್ಲಿ ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಚಾರದಲ್ಲಿ ಜನರು ಹಣದ ಜೊತೆಗೆ ಕಾರು, ಬೈಕ್, ಟ್ಯಾಕ್ಟರ್ ಮಾತ್ರವಲ್ಲದೇ ದನ, ಎಮ್ಮೆಗಳ ಮೇಲೆ ಬೆಟ್ಟಿಂಗ್ ಕಟ್ಟಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ