ಸ್ವಚ್ಛ ಭಾರತ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ

ಶುಕ್ರವಾರ, 1 ಅಕ್ಟೋಬರ್ 2021 (18:27 IST)
ಸ್ವಚ್ಛ ಭಾರತ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ  ಮುಂದಿಟ್ಟಿದೆ. ಸ್ಪಚ್ಛ ಭಾರತ್ ಅರ್ಬನ್ ಮಿಷನ್-2.0ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ಕೊಟ್ಟಿದ್ದಾರೆ. ಅಮೃತ ಮಿಷನ್ 2.O ಯೋಜನೆ ಉದ್ಘಾಟನೆ ಮಾಡಲಾಗಿದೆ.ಅರ್ಬನ್ ಮಿಷನ್-2.0ಯಿಂದ ತ್ಯಾಜ್ಯನ ನಿರ್ವಹಣೆಗೆ ಒತ್ತು ಕೊಡಲಾಗಿದೆ. ದೇಶದ  ಪ್ರತಿ ನಗರಕ್ಕೆ ಕುಡಿಯಲು ಶುದ್ಧ ನೀರು ಪೂರೈಕೆ ಮಾಡುವ ಗುರಿ ಹೊಂದಲಾಗಿದೆ. ಇನ್ನೂ ನಗರಗಳಲ್ಲಿ ಕಸ ಮುಕ್ತ, ಜಲ ಸುರಕ್ಷೆತೆ ಹೆಜ್ಜೆ ಮುಂದಿಟ್ಟಿದ್ದೇವೆ. ಈಗಾಗಲೇ ದೇಶದಲ್ಲಿ 10 ಕೋಟಿ ಶೌಚಾಲಯಗಳ ನಿರ್ಮಾಣದ ಗುರಿ  ಪೂರ್ಣಗೊಳಿಸಲಾಗಿದೆ. ಈ ಯೋಜನೆಯಡಿ 6 ಲಕ್ಷ ಕಾರ್ಯಕರ್ತರನ್ನು ಬಳಸಿಕೊಳ್ಳಗಾಗುತ್ತೆ.. ಇಷ್ಟಲ್ಲದೇ ಸ್ಪಚ್ಛ ಭಾರತ್ ಅರ್ಬನ್ ಮಿಷನ್-2.0 ಯೋಜನೆಯಡಿ ಭಾರತೀಯ ಮಹಿಳೆಯರ ಜೀವನವೂ ಬದಲಾವಣೆಯಾಗುತ್ತೆ ಎಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ