ಶೀಘ್ರವೇ ಲಸಿಕೆ ಅಭಿಯಾನಕ್ಕೆ ಝೈಕೋವ್-ಡಿ ಸೇರ್ಪಡೆ; ಕೇಂದ್ರ

ಶುಕ್ರವಾರ, 1 ಅಕ್ಟೋಬರ್ 2021 (08:07 IST)
ನವದೆಹಲಿ : ಝೈಡಸ್ ಕ್ಯಾಡಿಲಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಸೂಜಿರಹಿತ ಝೈಕೋವ್ ಡಿ ಲಸಿಕೆಯನ್ನು ಶೀಘ್ರವೇ ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದಲ್ಲಿ ಒಳಗೊಳ್ಳಲಾಗುವುದು ಹಾಗೂ ಸದ್ಯಕ್ಕೆ ದೇಶದಲ್ಲಿ ಲಭ್ಯವಿರುವ ಲಸಿಕೆಗಳಿಗಿಂತ ಭಿನ್ನವಾಗಿ ಬೆಲೆ ನಿಗದಿ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.

'ಝೋಕೋವ್ ಡಿ ಲಸಿಕೆ ಖರೀದಿ ಬೆಲೆ ಕುರಿತು ಸರ್ಕಾರ ಲಸಿಕೆ ತಯಾರಕರೊಂದಿಗೆ ಮಾತುಕತೆ ನಡೆಸುತ್ತಿದೆ. ಝೈಕೋವ್ ಡಿ ಲಸಿಕೆಯು ಮೂರು ಡೋಸ್ನದ್ದಾಗಿದ್ದು, ಸೂಜಿರಹಿತವಾಗಿರುವುದರಿಂದ ಈಗಿರುವ ಲಸಿಕೆಗಳಿಗಿಂತ ಬೆಲೆಯೂ ಭಿನ್ನವಾಗಿರುತ್ತದೆ' ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶೀಘ್ರವೇ ಝೈಕೋವ್ ಡಿ ಲಸಿಕೆಯನ್ನು ದೇಶದ ಲಸಿಕಾ ಅಭಿಯಾನದಲ್ಲಿ ಒಳಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
12 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡಲು ಅನುಮೋದನೆ ಪಡೆದುಕೊಂಡಿರುವ ವಿಶ್ವದ ಮೊದಲ ಡಿಎನ್ಎ ಕೊರೊನಾ ಲಸಿಕೆ ಕ್ಯಾಡಿಲಾ ಸಂಸ್ಥೆಯ ಝೈಕೋವ್ ಡಿ ಲಸಿಕೆಗೆ ಭಾರತದಲ್ಲಿ ಆಗಸ್ಟ್ ತಿಂಗಳಿನಲ್ಲಿ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ