ಹೆತ್ತ ತಾಯಿಯನ್ನೇ ಬೀದಿಗೆ ತಳ್ಳಿ ಕೈತೊಳೆದುಕೊಂಡ ಮಕ್ಕಳು

geetha

ಶನಿವಾರ, 20 ಜನವರಿ 2024 (18:05 IST)
ಚಿಕ್ಕಬಳ್ಳಾಪುರ : ಎಂಬತ್ತು ವರ್ಷಕ್ಕೂ ಹೆಚ್ಚು ವಯಸಾಗಿರುವ ಲಕ್ಷ್ಮಿದೇವಮ್ಮ ನತದೃಷ್ಟ ತಾಯಿ. ಇಬ್ಬರು ಪುತ್ರರು ಹಾಗೂ ಪತಿ ತೀರಿಕೊಂಡಿರುವ ಈ ವೃದ್ಧೆಯ ಹೆಣ್ಣು ಮಕ್ಕಳಿಬ್ಬರೂ ಮದುವೆಯಾಗಿ ಸುಖವಾಗಿದ್ದಾರೆ.  ಮುರುಕಲು ಗುಡಿಸಲಿನಲ್ಲಿ ವಾಸಿಸುತ್ತಿದ್ದ ಈಕೆಯ ಮನೆ ನಿರ್ಮಾಣಕ್ಕೆಂದು ಸರ್ಕಾರ 5 ಲಕ್ಷ ರೂ. ಸಹಾಯಧನ ನೀಡಿತ್ತು. ಕೂಡಲೇ ಹದ್ದುಗಳಂತೆ ಎರಗಿ ಬಂದ ಕಲಾವತಿ ಮತ್ತು ಲಕ್ಷ್ಮೀಕಾಂತೆ ತಾಯಿಯ ಬಳಿಯಿದ್ದ ಹಣವನ್ನು ದೋಚಿದ್ದಾರೆ. 

 ಹೆತ್ತ ತಾಯಿಯನ್ನೇ ಬೀದಿಗೆ ತಳ್ಳಿ ಕೈತೊಳೆದುಕೊಂಡ ಹೆಣ್ಣು ಮಕ್ಕಳು!
ಚಿಕ್ಕಬಳ್ಳಾಪುರ :  ಗಂಡ ಮತ್ತು ಗಂಡು ಮಕ್ಕಳನ್ನು ಕಳೆದುಕೊಂಡಿದ್ದ ವಯೋವೃದ್ಧೆಯೊಬ್ಬರನ್ನು ಆಕೆಯ ಹೆಣ್ಣು ಮಕ್ಕಳೇ ಬೀದಿಗೆ ತಳ್ಳಿರುವ ಘಟನೆ ಚಿಕ್ಕಬಳ್ಳಾಪುರದ ಲಿಂಗಶೆಟ್ಟಿಪುರದಲ್ಲಿ ನಡೆದಿದೆ. ತಾಯಿಯಿಂದ ಬರಬೇಕಿದ್ದ ಆಸ್ತಿಯನ್ನು ಪಾಲು ಮಾಡಿಕೊಂಡು, ಆಕೆಯ ಪಿಂಚಣಿ ಹಣ ಮತ್ತು ಉಳಿತಾಯ ಖಾತೆಯಲ್ಲಿದ್ದ ಹಣವನ್ನೆಲ್ಲ ನುಂಗಿ ನೀರು ಕುಡಿದ ಮೇಲೆ ಹೆಣ್ಣು ಮಕ್ಕಳು ಈ ನಿರ್ಧಾರ ಕೈಗೊಂಡಿದ್ದಾರೆ. 

ವೃದ್ಧೆಯ ಬಳಿಯಿದ್ದ ಹಣವೆಲ್ಲ ಖಾಲಿಯಾದ ಬಳಿಕ ಆಕೆಯನ್ನು ಕರೆದೊಯ್ದು ಊರ ಹೊರಗಿರುವ ಹುಣಿಸೆ ಮರದ ಬಳಿ ಬಿಸಾಡಿ ಹೋಗಿರುವ ರತ್ನದಂತಹ ಪುತ್ರಿಯರ ಅಮಾನವೀಯ ಕೃತ್ಯಕ್ಕೆ ಗ್ರಾಮಸ್ಥರು ಹಿಡಿಶಾಪ ಹಾಕಿ ದೂರು ನೀಡಿದ್ದರು. 
ಕೆಲ ಸಮಾಜಸೇವಾ ಸಂಸ್ಥೆ ಹಾಗೂ ಗ್ರಾಮಸ್ಥರು ಸಧ್ಯಕ್ಕೆ ವೃದ್ಧೆಯ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. 
ಪೊಲೀಸರು ಇಬ್ಬರೂ ಪುತ್ರಿಯರನ್ನು ಕರೆಸಿ ಛೀಮಾರಿ ಹಾಕಿದ್ದು, ತಾಯಿಯನ್ನು ನೋಡಿಕೊಳ್ಳುವುದಾಗಿ ಪುತ್ರಿಯರು ಸಧ್ಯಕೆ ಭರವಸೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ