ಕಡಿಮೆಯಾಗುತ್ತಿದೆ ಸಿಟಿಯ ಟ್ರಾಫಿಕ್ ಸಮಸ್ಯೆ

ಶನಿವಾರ, 3 ಡಿಸೆಂಬರ್ 2022 (14:28 IST)
ಬೆಂಗಳೂರು : ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆ ನಿಧನವಾಗಿ ಕಡಿಮೆಯಾಗುತ್ತಿದೆ. ಬೆಳಗ್ಗೆ ಮತ್ತು ಸಂಜೆ ವಾಹನದಟ್ಟಣೆ ಇದ್ದರೂ ಹಲವು ಕಡೆ ವಾಹನ ಸವಾರರು ವೀಕೆಂಡ್ ಸಂಚಾರದಷ್ಟೇ ಸಲೀಸಾಗಿ ಸಂಚಾರ ಮಾಡುತ್ತಿದ್ದಾರೆ.

ಟ್ರಾಫಿಕ್ ಕಿರಿಕಿರಿಗೆ ಸ್ಪೆಷಲ್ ಕಮೀಷನರ್ ಎಂ.ಎ ಸಲೀಂ ಮತ್ತು ಜಂಟೀ ಆಯುಕ್ತ ಅನುಚೇತ್ ಕಾರ್ಯಕ್ಷಮತೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬೆಳಗ್ಗೆ 7:30ಕ್ಕೆ ಐಪಿಎಸ್ ಅಧಿಕಾರಿಗಳು ಸೇರಿದಂತೆ ಟ್ರಾಫಿಕ್ ಪೊಲೀಸರು ರಸ್ತೆ ಮೇಲಿರಬೇಕು. ಅರ್ಧ ಗಂಟೆ ಮೊದಲೇ ಎಲ್ಲಾ ಸಿಬ್ಬಂದಿ ಪ್ರಮುಖ ಜಂಕ್ಷನ್ಗಳಲ್ಲಿರಬೇಕು ಎಂದು ಸೂಚನೆ ನೀಡಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ