ಸಾವು,ಪೋಸ್ಟಿಂಗ್ ಕುರಿತಂತೆ ತನಿಖೆ ಆಗಿ ಸತ್ಯ ಹೊರ ಬರಲಿದೆ ಎಂದ ಸಿಎಂ

ಸೋಮವಾರ, 31 ಅಕ್ಟೋಬರ್ 2022 (15:01 IST)
ನಾಳೆ 67ನೇ‌ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ.ನಾಳೆ‌ ಮಧ್ಯಾಹ್ನ 4 ಗಂಟೆಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ವಿಧಾನಸೌಧದ ಮೆಟ್ಟಿಲುಗಳು ಮೇಲೆ ಪುನೀತ್ ಅವರಿಗೆ ಪ್ರಶಸ್ತಿ ನೀಡಲಾಗುವುದು.ಎಲ್ಲಾ ಅಭಿಮಾನಿಗಳು ಭಾಗವಹಿಸಬೇಕೆಂದು ಕೇಳಿಕೊಳ್ಳುತ್ತೇನೆ .ವಿವಿಧ ಕ್ಷೇತ್ರಗಳ ಸಾಧಕರಿಗೆ ನಾಳೆ‌ ರಾಜ್ಯೋತ್ಸವ ಪ್ರಶಸ್ತಿ ನೀಡ್ತೀದ್ದೇವೆ.ನವೆಂಬರ್ 2,3,4 ರಂದು ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮ ಮಾಡ್ತಿದ್ದೇವೆ.ವಿಶ್ವದ ನಾನಾ ಭಾಗದ ಹೂಡಿಕೆದಾರರು,ಬಂಡವಾಳಶಾಹಿಗಳು ಭಾಗಿಯಾಗ್ತಾರೆ.5 ಲಕ್ಷ ಕೋಟಿ ಹೂಡಿಕೆಯಾಗಲಿದೆ‌.ಅನೇಕ ಕ್ಷೇತ್ರಗಳ ಪ್ರಗತಿ,ಬೆಳವಣಿಗೆ ಸವಾಲುಗಳ ಬಗ್ಗೆ ಕೂಡ ಚರ್ಚೆ ನಡೆಸಲಾಗುವುದು.ಈ ಕಾರ್ಯಕ್ರಮ ಮುಂದಿನ ಕರ್ನಾಟಕದ ಆರ್ಥಿಕ ಬೆಳವಣಿಗೆಯ ದಿಕ್ಸೂಚಿಯಾಗಿರಲಿದೆ.ಈ ಕಾರ್ಯಕ್ರಮಕ್ಕೂ ಎಲ್ಲರೂ ಭಾಗಿಯಾಗಬೇಕು ಎಂದು ಕೋರುತ್ತೇನೆ ಎಂದು  ಮುಖ್ಯಮಂತ್ರಿ ಬೊಮ್ಮಾಯಿ‌ ಹೇಳಿದ್ದಾರೆ.
 
ಇನ್ನೂ ಸಚಿವ ಎಂಟಿಬಿ ನಾಗರಾಜ್ ಕುರಿತು ವೀಡಿಯೋ ವಿಚಾರವಾಗಿ ಈಗಾಗಲೇ ಡಿಜಿಪಿಯವರಿಗೆ ಸೂಚನೆ ನೀಡಿದ್ದೇನೆ. ಶೀಘ್ರವೇ ತನಿಖೆಯಿಂದ ಸತ್ಯ ಹೊರಗೆ ಬರಬೇಕು.ಅದಕ್ಕಾಗಿ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ತನಿಖೆಗೆ ಸೂಚಿಸಲಾಗಿದೆ.ಹಿಂದೆ ಜ್ಯುಡಿಷಿಯಲ್ ತನಿಖೆ ಬಗ್ಗೆ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ.ರೀಡೋ ತನಿಖೆ ಎಲ್ಲ ಏನಾಗಿದೆ ಎಂದು ಗೊತ್ತಿದೆ.ಅದಕ್ಕಾಗಿ ಬೇಗ ಸತ್ಯ ಹೊರಗೆ ಬರಲಿ.ಆ ಕಾರಣಕ್ಕಾಗಿ ಅಧಿಕಾರಿಗಳಿಂದ ತನಿಖೆ ಮಾಡಿಸಲಾಗ್ತಿದೆ.ಸಾವು, ಪೋಸ್ಟಿಂಗ್ ಕುರಿತಂತೆ ತನಿಖೆ ಆಗಿ ಸತ್ಯ ಏನೆಂದು ಹೊರಗೆ ಬರಲಿದೆ ಎಂದು ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಕಾಂಗ್ರೆಸ್ ಗೆ ಸಿಎಂ ತಿರುಗೇಟು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ