ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ಸತಾಯಿಸುವ ಅಧಿಕಾರಿಗಳಿಗೆ ಶಾಸಕರೊಬ್ಬರು ಚಳಿ ಬಿಡಿಸಿದ್ದಾರೆ.
ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ಸತಾಯಿಸಿ ಕಛೇರಿಗೆ ಅಲೆಸದೇ ನಿಗದಿತ ಅವಧಿಯೊಳಗೆ ಮಾಡಿಕೊಡಬೇಕು. ಹೀಗಂತ ಶಾಸಕ ನಾರಾಯಣಗೌಡರಿಂದ ಅಧಿಕಾರಿಗಳಿಗೆ ಕಂದಾಯ ಅದಾಲತ್ ಸಾರ್ವಜನಿಕ ಸಭೆಯಲ್ಲಿ ಸ್ಪಷ್ಟ ಸೂಚನೆ ಕೊಡಲಾಗಿದೆ.
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ನಡೆದ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ ಮತ್ತು ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿದ್ದ ಸಭೆಯಲ್ಲಿ ಶಾಸಕರು, ಸಂಧ್ಯಾಸುರಕ್ಷಾ, ವಿಕಲಚೇತನ ಹಾಗೂ ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ಆದೇಶದ ಪ್ರ ಪತ್ರಗಳನ್ನು ವಿತರಿಸಿದರು.
ಪ್ರತಿ 10 ದಿನಗಳಿಗೊಮ್ಮೆ ಹೋಬಳಿ ಕೇಂದ್ರಗಳಲ್ಲಿ ಜನಸ್ಪಂದನಾ ಸಭೆಗಳನ್ನು ನಡೆಸಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡು ಹಿಡಿಯುವಂತೆ ಶಾಸಕ ನಾರಾಯಣಗೌಡ ಹೇಳಿದ್ರು.