ಮನೆಗಳ ಮೇಲೆ ಗುಡ್ಡ ಕುಸಿತ: ಜನರ ರಕ್ಷಣೆ

ಶನಿವಾರ, 18 ಆಗಸ್ಟ್ 2018 (20:34 IST)
ಜೋಡುಪಾಲಾದಲ್ಲಿ ಗುಡ್ಡ  ಜರಿದು  ಮೂರು ಮನೆಗಳು ಸಂಪೂರ್ಣ ನಾಶವಾಗಿವೆ. ಹಲವರು ಮಣ್ಣಿನಡಿಗೆ  ಸಿಲುಕಿ ಕೊಂಡಿದ್ದು ಅವರನ್ನು ರಕ್ಷಣೆ ಮಾಡಲಾಗಿದೆ.

ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ. ಆದ್ರೆ ಪ್ರಸ್ತುತ ಮಳೆಯ ಪ್ರಮಾಣ ಇಳಿಕೆ ಆಗಿರುವ ಕಾರಣ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ನದಿಗಳಲ್ಲಿ ನೆರೆಯ ಪ್ರಮಾಣ ಇಳಿಕೆ ಆಗುತ್ತಿದೆ.

ಸಂಪಾಜೆ ಹಾಗೂ ಮಡಿಕೇರಿ ಮದ್ಯದ  ಜೋಡುಪಾಲಾದಲ್ಲಿ ಗುಡ್ಡ  ಜರಿದು  ಮೂರು ಮನೆಗಳು ಸಂಪೂರ್ಣ ನಾಶವಾಗಿವೆ. ಹಲವರು ಮಣ್ಣಿನಡಿಗೆ  ಸಿಲುಕಿ ಕೊಂಡಿದ್ದು ಅವರನ್ನು ರಕ್ಷಣೆ ಮಾಡಲಾಗಿದೆ. ಇಲ್ಲಿದ್ದ ಜನರನ್ನು ಸಂಪಾಜೆ ಚೆಂಬು ಹಾಗೂ ಅರಂತೋಡು  ಶಾಲೆಗಳಿಗೆ ಸ್ಥಳಾಂತರಿಸಲಾಗಿದೆ. ಶಾಲೆಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಜೋಡುಪಾಲಾದ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 100 ಮಂದಿ ನಿರಾಶ್ರಿತರು  ಆಶ್ರಯ ಪಡೆದಿದ್ದಾರೆ. ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ.

ಜೋಡುಪಾಲಾ ಬಳಿ ಗುಡ್ಡೆ ಸಂಪೂರ್ಣ ಕುಸಿದು ಬಿದಿದ್ದು ರಸ್ತೆಯಿಡೀ  ನೀರು ಹರಿದು ಬರುತ್ತಿದೆ. ಸುಮಾರು 3 ಕಿಲೋ ಮೀಟರ್ ದೂರ ವಾಹನವಾಗಲಿ,  ಜನರಾಗಲಿ  ಹೋಗಲು ಸಾಧ್ಯವಿಲ್ಲದ  ಪರಿಸ್ಥಿತಿ ನಿರ್ಮಾಣವಾಗಿದೆ.





ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ