ಕೊಚ್ಚಿಹೋದ ಕಾಲುಸಂಕ: ಸಂಕಷ್ಟದಲ್ಲಿ ಮಕ್ಕಳು

ಶನಿವಾರ, 18 ಆಗಸ್ಟ್ 2018 (19:18 IST)
ಕರಾವಳಿ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಕೊಂಚ ಕಡಿಮೆಯಾಗಿದ್ದರೂ ಸಾಕಷ್ಟು ಅವಾಂತರ ಸೃಷ್ಟಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಜಿಲ್ಲೆಯ ಜೊಯಿಡಾ ತಾಲೂಕಿನ ಜಗಲಪೇಟ ಗ್ರಾಮ ಪಂಚಾಯತ ವ್ಯಾಪ್ತಿಯ ತಿಂಬೋಲಿಗೆ ಸಂಪರ್ಕ ಕಲ್ಪಿಸುವ ಕಾಲುಸಂಕ ಕೊಚ್ಚಿಕೊಂಡು ಹೋಗಿರುವುದರಿಂದ ಗ್ರಾಮಸ್ಥರು ಪರದಾಡುವಂತಾಗಿದೆ. ಶಾಲೆಗೆ ತೆರಳುವ ಮಕ್ಕಳು ಜೀವ  ಭಯದಿಂದಲೇ ಹಳ್ಳ ದಾಟಿ ಶಾಲೆಗೆ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಭಾರಿ ಮಳೆ ಇರುವ ಕಾರಣ ಒಂದೆರೆಡು ದಿನ ಮಕ್ಕಳು ಮನೆಗೆ ಬರಲಿಕ್ಕಾಗದೇ ಶಾಲೆಯಲ್ಲಿಯೇ ರಾತ್ರಿ ಕಳೆದಿದ್ದರು.

ಇನ್ನು ಕೊಂಚ ಮಳೆ ಕಡಿಮೆಯಾಗಿರುವ ಬೆನ್ನಲೆ ಮನೆ ಸೇರಿದ್ದ ವಿದ್ಯಾರ್ಥಿಗಳು ಪುನಃ ಶಾಲೆಗೆ ತೆರಳಿ ವಾಪಸ್ಸಾಗುವ ಹೊತ್ತಿಗೆ ನೀರಿನ ಸೆಳೆತಕ್ಕೆ  ಸೇತುವೆ ಕೊಚ್ಚಿಹೋಗಿದೆ. ತುಂಬಾ ಅಪಾಯಕಾರಿಯಾಗಿರುವ ಈ ಹಳ್ಳ  ಒಂದು ಚೂರು ಆಯ ತಪ್ಪಿದರೂ ಮಕ್ಕಳು ನೀರಿನಲ್ಲಿ ಕೊಚ್ಚಿಹೋಗುವುದು ಪಕ್ಕಾ. ಪಾಲಕರ ಸಹಾಯದಿಂದ ನದಿ ದಾಟಿಸಲಾಗುತ್ತಿದೆ. ಈ ಬಗ್ಗೆ ಅಧಿಕಾರಗಳ ಗಮನಕ್ಕೂ ತರಲಾಗಿದೆ.  ಜೀವ ಬಲಿ ಆಗುವ ಮೋದಲು ಇಲ್ಲಿ ವ್ಯವಸ್ಥೆ ಸರಿಪಡಿಸುವತ್ತ ಸಂಬಂಧಿಸಿದ ಇಲಾಖೆ ಮತ್ತು ತಾಲೂಕಾಡಳಿತ ಕ್ರಮ ಕೈಗೊಳ್ಳಬೇಕು ಅಂತಾ ಗ್ರಾಮಸ್ಥರು ಆಗ್ರಹಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ