ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಸರ್ಕಾರಿ ಕಟ್ಟಡದ ದುಸ್ಥಿತಿ

ಶನಿವಾರ, 29 ಜುಲೈ 2023 (14:28 IST)
ಸರ್ಕಾರಿ ಕಟ್ಟಡದ ದುಸ್ಥಿತಿ ಹೇಳೋರಿಲ್ಲದಂತಾಗಿದೆ. ಆರ್ ಟಿ ಒ ಕಚೇರಿ ಬೀಳುವ ಸ್ಥಿತಿಯಲ್ಲಿದೆ.ಆರ್ ಟಿಒ ಕಟ್ಟಡದ ಲೀಫ್ಟ್ ಕೆಟ್ಟು ನಿಂತು ವರ್ಷಗಳೇ ಕಳೆದಿದೆ.ಎಷ್ಟೇ ಕೇಳಿದ್ರು ಅಧಿಕಾರಿಗಳು ಕಿವಿಕೊಡ್ತಿಲ್ಲ.ಮಹಡಿ ಹತ್ತಲು ವೃದ್ಧರು, ಅಂಗವಿಕಲರು ಕಷ್ಟಪಡುತ್ತಿದ್ದಾರೆ.ಇದು ಯಶವಂತಪುರದ ಆರ್ ಟಿ ಓ ಪರಿಸ್ಥಿತಿ ಇದೆ.ದಿನ ಬೆಳಗಾದ್ರೆ ಆರ್ ಟಿ ಓ ದಲ್ಲಿ ಕೆಲಸವಿದೆ ಎಂದ್ರು ಅವರು ಮಹಡಿಗಳನ್ನ ಹತ್ತೊದ್ರಲ್ಲೇ ಸುಸ್ತಾಗಿದ್ದಾರೆ.ಯಪ್ಪ... ಎಂದು ಇದಕ್ಕೆಲ್ಲ ಮುಕ್ತಿ ಯಾವಾಗ ಅಂತ ಜನರು ಕಾಯುತ್ತಿದ್ದಾರೆ.ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದ್ರು ಯಾವುದೇ ಪ್ರಯೋಜನವಾಗಿಲ್ಲ.ಲಿಫ್ಟ್ ಇಲ್ದೆ ಜನರು ಕಷ್ಟಪಡುತ್ತಿದ್ದಾರೆ .ಇನ್ನು ಕಟ್ಟಡ ಸಹ ಬೀಳುವ ಪರಿಸ್ಥಿತಿಯಲ್ಲಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ