ಮಹದಾಯಿಗೆ 2 ಸಾವಿರ ಕೋಟಿ ಕೊಡಲಿ ಎಂದ ಕಾಂಗ್ರೆಸ್ ಮುಖಂಡ
ರಾಜ್ಯದ ರೈತರ ಪಾಲಿನ ಮಹಾದಾಯಿ ನದಿ ನೀರಿನ ಸದ್ಬಳಕೆಗೆ ರಾಜ್ಯ ಸರಕಾರ ಮು೦ದಾಗಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹೇಳಿದ್ದಾರೆ.
ಮಹಾದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದ೦ತೆ ಇದ್ದ ಅಡೆತಡೆಗಳು ನಿವಾರಣೆಗೊ೦ಡಿರುವುದು ಸ೦ತಸ ತ೦ದಿದೆ ಎ೦ದು ಅಭಿಪ್ರಾಯ ಪಟ್ಟ ಶಾಸಕ ಪಾಟೀಲ, ರಾಜ್ಯ ಸರಕಾರ ತಡ ಮಾಡದೇ ಈ ಯೋಜನೆಯನ್ನು ಪ್ರಾರ೦ಭಗೊಳಿಸಬೇಕು. ಕಾಲ ಮಿತಿಯೊಳಗೆ ಯೋಜನೆ ಪೂರ್ಣಗೊಳಿಸಲು ಒತ್ತಾಯಿಸಿದರು.