ಮೂನ್ನೂರರ ರೆಂಜಿನಲ್ಲಿ ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಕೇಸ್

ಮಂಗಳವಾರ, 21 ಸೆಪ್ಟಂಬರ್ 2021 (18:04 IST)
ಬಿಬಿಎಂಪಿ ವ್ಯಾಪ್ತಿಯ ೧೯೮ ವಾರ್ಡಗಳಲ್ಲಿ ಕೊರೋನಾ ಕೇಸ್ ಮೂನ್ನೂರರ ರೆಂಜಿನಲ್ಲಿದೆ. ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಕಂಟ್ರೋಲ್ ಗೆ ಬಂದಿದೆ.
ನಗರದಲ್ಲಿ 83% ಕ್ಕಿಂತ ಹೆಚ್ಚು ಜನ ಒಂದು‌ ಡೋಸ್ ಪಡೆದಿದ್ದಾರೆ. 43 % ದಷ್ಟು ಜನ ಎರಡನೇ ಡೋಸ್ ಕೊಟ್ಟಿದ್ದೆವೆ.ಮುಂದಿನ ದಿನಗಳಲ್ಲಿ ಶೇಕಡ 100 ರಷ್ಟು ಲಸಿಕೆ  ಕೊಡುವ ಯೋಜನೆ ಮಾಡ್ತಿವಿ ಅಂತ ಪಾಲಿಕೆ ಅಯುಕ್ತ ಗೌರವ್ ಗುಪ್ತ್ ಇಂದು ಸುದ್ಧಿ ಗೋಷ್ಟಿ ನಡೆಸಿ ಮಾಹಿತಿ ನೀಡಿದ್ರು.
ಇನ್ನು ಬಿಬಿಎಂಪಿ ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಕೊಟ್ಟಿಲ್ಲ. ಚಟುವಟಿಕೆಗಳ ನಿರ್ಬಂದನೆಗಳು ಸರ್ಕಾರಕ್ಕೆ ಬಿಟ್ಟ ವಿಚಾರ. ಅಧಿವೇಶನ ಮುಗಿದ ಬಳಿಕ ಸರ್ಕಾರ ಸಭೆ ಮಾಡಿ ನಿರ್ಧಾರ ತೆಗೆದುಕೊಳ್ಳಲಿದೆ. ತಜ್ಞರ ಸಲಹೆ ಮೇರೆಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ. ಮುಂದುವರಿದ ದೇಶಗಳಲ್ಲೂ ವ್ಯಾಕ್ಸಿನ್ ಆದ ಬಳಿಕವೂ 100% ರಷ್ಟು  ವ್ಯಾಪರಕ್ಕೆ ಸಡಿಲಿಕೆಕೊಟ್ಟಿಲ್ಲ. ಇನ್ನೂ ಬೆಂಗಳೂರಿನಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಓಪನ್ ಮಾಡಬೇಕಾಗುತ್ತದೆ. ಹಂತ ಹಂತವಾಗಿ ಹೇಗೆ ಮಾಡಬೇಕು ಅನ್ನೊದನ್ನ ಚಿಂತಿಸಬೇಕು.
 ಇನ್ನು ನಗರದಲ್ಲಿ ಗುಂಡಿ ಗಳನ್ನು ಮುಚ್ಚಲಾಗಿದೆ.
ಕೆಲವು ಕಡೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ.
6 ನೇ ತಾರೀಖು ನಗರದಲ್ಲಿ 1334 ಗುಂಡಿಗಳು ಇತ್ತು. 
ಸದ್ಯ ನಗರದ ಬಹುತೇಕ ಕಡೆ ಗುಂಡಿ ಮುಚ್ಚಲಾಗಿದೆ. ಇನ್ನು ಮೂರು ದಿನದಲ್ಲಿ ನಗರದ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚುತ್ತವೆ ಅಂತ ತಿಳಿಸಿದ್ರು..

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ