ಕೊರೊನಾ ಸ್ಪೋಟ!

ಬುಧವಾರ, 29 ಡಿಸೆಂಬರ್ 2021 (14:56 IST)
ಬೆಂಗಳೂರು : ಹೈರಿಸ್ಕ್ ದೇಶಗಳಿಂದ ಬೆಂಗಳೂರಿಗೆ 54,000 ಜನರು ಆಗಮಿಸಿದ್ದಾರೆ. ಕಳೆದ 29 ದಿನಗಳಲ್ಲಿ 54,000ಕ್ಕೂ ಹೆಚ್ಚು ಜನರ ಆಗಮನ ಆಗಿದೆ.
 
ಈವರೆಗೆ 54,000 ಪ್ರಯಾಣಿಕರಲ್ಲಿ 105 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಐಸೋಲೇಷನ್ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಡಿಸಿ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ 27 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಓಕಳಿಪುರಂನ ಶೋಭಾ ಇಂದ್ರಪ್ರಸ್ಥ ಅಪಾರ್ಟ್ಮೆಂಟ್ನಲ್ಲಿ ಘಟನೆ ನಡೆದಿದೆ. ಇಲ್ಲಿ ಡಿಸೆಂಬರ್ 19ರಂದು ಬ್ಯಾಡ್ಮಿಂಟನ್ ಟೂರ್ನಮೆಂಟ್ ಆಯೋಜಿಸಿದ್ದರು.

ಅಪಾರ್ಟ್ಮೆಂಟ್ ನಿವಾಸಿಗಳೇ ಟೂರ್ನಮೆಂಟ್ ಆಯೋಜಿಸಿದ್ದರು. ಬಳಿಕ ವಿದೇಶಕ್ಕೆ ತೆರಳಲು ನಿವಾಸಿಗಳು ಕೊವಿಡ್ ಟೆಸ್ಟ್ ಮಾಡಿಸಿದ್ದರು. ಕೊವಿಡ್-19 ಟೆಸ್ಟ್ ವೇಳೆ 27 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ