ನೈಟ್ ಕರ್ಫ್ಯೂ ಅಗತ್ಯ ಏನಿದೆ..?
ಬಹುತೇಕ ಸಾರ್ವಜನಿಕರಿಂದಲೂ ಕೂಡಾ ನೈಟ್ ಕರ್ಫ್ಯೂಗೆ ವಿರೋಧ ವ್ಯಕವಾಗಿದೆ.
ರಾತ್ರಿ 10 ಗಂಟೆಯಿಂದ ಜನರ ಓಡಾಟಕ್ಕೆ ನಿಯಂತ್ರಣ ಹೇರುವ ಅಗತ್ಯ ಏನಿದೆ..? ಹಗಲು ಜನಸಂದಣಿ ಹೆಚ್ಚಿರುತ್ತದೆ. ರಾತ್ರಿ ವೇಳೆ ಜನರ ಓಡಾಟ ಕಡಿಮೆ.
ಹೀಗಿರುವಾಗ ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ನೈಟ್ ಕರ್ಫ್ಯೂ ಅಗತ್ಯ ಏನಿದೆ? ಹಗಲಿನಲ್ಲಿ ಜನರಿಗೆ ಗುಂಪು ಸೇರಲು ಅವಕಾಶ ನೀಡಿ ರಾತ್ರಿ ಹೊತ್ತು ನೈಟ್ ಕರ್ಫ್ಯೂ ನಡೆಸಿದರೆ ಪರಿಣಾಮ ಏನು ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಮಾತ್ರವಲ್ಲದೆ ಕೋವಿಡ್ ವೈರಸ್, ಓಮಿಕ್ರಾನ್ ರಾತ್ರಿ ಹೊತ್ತಿನಲ್ಲಷ್ಟೇ ಹರಡಲಿದೆಯೇ? ಹಗಲಿನಲ್ಲಿ ಅದು ವಿಶ್ರಾಂತಿಗೆ ಜಾರುವುದೇ ಎಂದು ಜನರು ಟ್ರೋಲ್ ಕೂಡ ಮಾಡುತ್ತಿದ್ದಾರೆ.