ಜೋಳ, ತೊಗರಿ, ಗೋಧಿ ವ್ಯಾಪಾರಕ್ಕೆ ತಟ್ಟಿದ ಕೊರೊನಾ ಭೀತಿ

ಭಾನುವಾರ, 15 ಮಾರ್ಚ್ 2020 (15:29 IST)
ರಾಜ್ಯ ಸರ್ಕಾರವು “ಕೊರೋನಾ ವೈರಸ್” ಸಾಂಕ್ರಾಮಿಕ ರೋಗವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವ್ಯಾಪಾರ ವಹಿವಾಟು ಬಂದ್ ಮಾಡಲಾಗಿದೆ.

ಒಂದು ವಾರ ಕಾಲ ಕಲಬುರಗಿ ಎ.ಪಿ.ಎಂ.ಸಿ. ವ್ಯಾಪಾರ ವಹಿವಾಟನ್ನು ರದ್ದುಪಡಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಗುರುಬಸಪ್ಪಾ ಶಿವಶರಣಪ್ಪಾ ಕಣಕಿ ಹಾಗೂ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಒಂದು ವಾರ ಕಾಲ ವ್ಯಾಪಾರ ವಹಿವಾಟನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವುದರಿಂದ ಎ.ಪಿ.ಎಂ.ಸಿ. ಪ್ರಾಂಗಣಕ್ಕೆ ದಿನನಿತ್ಯ ಆವಕವಾಗುವ ವಿವಿಧ ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ತರದಂತೆ ರೈತರಲ್ಲಿ ಮನವಿ ಮಾಡಲಾಗಿದೆ. 

ಇದಲ್ಲದೆ ಮುಂದಿನ ಆದೇಶದ ವರೆಗೆ ಎ.ಪಿ.ಎಂ.ಸಿ. ಪ್ರಾಂಗಣಕ್ಕೆ ರೈತರು ಬಾರದಂತೆ ಕೋರಿರುವ ಸಮಿತಿ ಅಧ್ಯಕ್ಷರು, ಈಗಾಗಲೇ ಪೇಟೆ ಕಾರ್ಯಕರ್ತರ ಸಂಪರ್ಕದಲ್ಲಿರುವ ಎಲ್ಲಾ ರೈತ ಬಾಂಧವರಿಗೆ ಸಂಪರ್ಕಿಸಿ ಒಂದು ವಾರದ ಮಟ್ಟಿಗೆ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿರುವ ವಿಷಯವನ್ನು ಹಾಗೂ ಯಾವುದೇ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತರದಂತೆ ರೈತರಿಗೆ ಮಾಹಿತಿ ನೀಡಬೇಕು ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ