ಅಪ್ರಾಪ್ತ ಮಗನಿಗೆ ಬೈಕ್ ಕೊಡಿಸಿದ ತಂದೆಗೆ ಬರೋಬ್ಬರಿ ₹ 27 ಸಾವಿರ ದಂಡ ಹಾಕಿದ ನ್ಯಾಯಾಲಯ

Sampriya

ಶನಿವಾರ, 14 ಡಿಸೆಂಬರ್ 2024 (16:51 IST)
Photo Courtesy X
ಹಾವೇರಿ: ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ರಾಣೆಬೆನ್ನೂರು ಜೆಎಂಎಫ್‌ಸಿ ನ್ಯಾಯಾಲಯವು ಅಪ್ರಾಪ್ತ ವಯಸ್ಸಿನ ಮಗನಿಗೆ ಬೈಕ್ ನೀಡಿದ್ದಕ್ಕಾಗಿ ತಂದೆಗೆ ಬರೋಬ್ಬರಿ ₹ 27,000 ದಂಡ ವಿಧಿಸಿ ಆದೇಶ ಹೊರಡಿಸಿದೆ.

2024ರ ಜುಲೈ 30ರಂದು ರಾಣೆಬೆನ್ನೂರು ನಗರದ ಹಲಗೇರಿ ಕ್ರಾಸ್ ಬಳಿ ಬೈಕ್ ಅಪಘಾತವಾಗಿತ್ತು. ಅಪಘಾತದಲ್ಲಿ ಜಾಕಿರ್ ಜಮಾಲುದ್ದೀನ್ ಕಮದೋಡ ಎಂಬ ವ್ಯಕ್ತಿ ಗಾಯಗೊಂಡಿದ್ದು, ಅಪರಾಧ ಪ್ರಕರಣ ದಾಖಲಾಗಿತ್ತು.

ರಾಣೆಬೆನ್ನೂರು ನಗರದ ಕಡ್ರಕಟ್ಟಿ ನಗರದ ನಿವಾಸಿ ದಿಳ್ಳೆಪ್ಪ ಕಾಟೆ ಎಂಬುವರು ತನ್ನ ಅಪ್ರಾಪ್ತ ಮಗನಿಗೆ ಬೈಕ್ ನೀಡಿದ್ದು, ಅದು ಅಪಘಾತವಾಗಿತ್ತು. ಈ ಪ್ರಕರಣದಲ್ಲಿ ಅಪ್ರಾಪ್ತ ಮಗನಿಗೆ ಬೈಕ್ ನೀಡಿದ ತಂದೆಗೆ ರಾಣೆಬೆನ್ನೂರು ಸ್ಥಳೀಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು₹  27,000 ದಂಡ ವಿಧಿಸಿದ್ದಾರೆ.

ಅಪಘಾತದ ಘಟನೆಯ ಕುರಿತು ರಾಣೆಬೆನ್ನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ದಿಳ್ಳೆಪ್ಪ ಕಾಟೆ ವಿರುದ್ಧ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ಬೈಕ್ ಮಾಲೀಕ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ