ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಮುಸ್ಲಿಮರ ಮೇಲೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಮುಸ್ಲಿಮರಿಗೆ ಮುತ್ತು ಕೊಡುತ್ತದೆ, ನಮಗೆ ಲಾಠಿ ಏಟು ಕೊಡುತ್ತದೆ ಎಂದು ಬಿಜೆಪಿ ನಾಯಕ ಅರವಿಂದ್ ಬೆಲ್ಲದ್ ಆರೋಪಿಸಿದ್ದಾರೆ.
ಇತ್ತೀಚೆಗೆ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅರವಿಂದ್ ಬೆಲ್ಲದ್ ಈ ರೀತಿ ಟೀಕೆ ಮಾಡಿದ್ದಾರೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಕೋರರಿಗೆ ಮುತ್ತು ಕೊಡುತ್ತದೆ, ಕುಕ್ಕರ್ ಬಾಂಬ್ ಸ್ಪೋಟಿಸುವವರಿಗೆ ಮುತ್ತು ಕೊಡುತ್ತದೆ. ಆದರೆ ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡುವ ನಮಗೆ ಲಾಠಿ ಏಟು ಕೊಡುತ್ತದೆ ಎಂದಿದ್ದಾರೆ.
ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲೀಗಳು ಹೋರಾಟ ಮಾಡುವಾಗ ಲಾಠಿ ಚಾರ್ಜ್ ಮಾಡಿರುವುದಕ್ಕೆ ಬಿಜೆಪಿ ತೀವ್ರ ಟೀಕೆ ಮಾಡುತ್ತಲೇ ಇದೆ. ಇದೀಗ ಅರವಿಂದ್ ಬೆಲ್ಲದ್ ರಾಜ್ಯ ಸರ್ಕಾರಕ್ಕೆ ಮುಸ್ಲಿಮರ ಮೇಲೆ ಎಲ್ಲಿಲ್ಲದ ಪ್ರೀತಿ ಎಂದು ವಾಗ್ದಾಳಿ ನಡೆಸಿದ್ದಾರೆ. ಎಲ್ಲರ ಮೀಸಲಾತಿ ತೆಗೆದು ಸಿದ್ದರಾಮಯ್ಯ ಮುಸ್ಲಿಮರಿಗೆ ಮೀಸಲಾತಿ ಕೊಡಲು ಹೊರಟಿದ್ದಾರೆ ಎಂದು ಟೀಕೆ ಮಾಡಿದ್ದಾರೆ.
ಮುಸ್ಲಿಮರಿಗೆ ಸಂವಿಧಾನ ವಿರುದ್ಧವಾಗಿ ಮೀಸಲಾತಿ ನೀಡಲಾಗಿದೆ. ಸಿಎಂ ಪ್ರಕಾರ ಮುಸ್ಲಿಮರು ಮಾತ್ರ ಏನು ಬೇಕಾದರೂ ಕೇಳಬಹುದು, ಇವರು ಕೊಡಬಹುದು. ಏನಾದರೂ ಕೇಳುವುದಿದ್ದರೆ ಮುಸ್ಲಿಮರು ಮಾತ್ರ ಕೇಳಬೇಕು ಎಂಬುದು ಸಿದ್ದರಾಮಯ್ಯ ಧೋರಣೆ ಎಂದು ಅರವಿಂದ್ ಬೆಲ್ಲರ್ ಟೀಕಿಸಿದ್ದಾರೆ.