ನಿಶ್ಚಿತಾರ್ಥದ ಊಟಕ್ಕೆ ಮನೆಯಲ್ಲಿ ಸಾಕಿದ್ದ ಹಸುವೇ ಬಲಿ!
ಈಚಿಕೆರೆಯ ರೋಷನ್ ಮನೆಯ ಹಿಂಭಾಗದ ಶೆಡ್ನಲ್ಲಿ ಹಸುವನ್ನು ಕಡಿಯುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಎನ್.ಆರ್.ಪುರ ಪಿಎಸ್ಐ ದಿಲೀಪ್ ಹಾಗೂ ಸಿಬ್ಬಂದಿ ಶಂಕರ್, ಆನಂದ್ ಹಾಗೂ ರಾಜೇಶ್ ದಾಳಿ ಮಾಡಿದ್ದರು.
ಸ್ಥಳದಲ್ಲಿ ಐವರು ದನದ ಮಾಂಸವನ್ನು ಕಡಿಯುತ್ತಿರುವುದು ಕಂಡು ಬಂದಿತ್ತು. ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದು ಚಾಲ್ಸ್ ಹಾಗೂ ಜಿಜೋ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇಬ್ಬರನ್ನು ಕರೆದೊಯ್ದು ವಿಚಾರಣೆ ನಡೆಸಿದಾಗ ರೋಷನ್ ಮಗಳ ನಿಶ್ಚಿತಾರ್ಥದ ಮಾಂಸ ಊಟಕ್ಕೆ ಹಸುವನ್ನು ಕಡಿಯುತ್ತಿದ್ದೆವು ಒಪ್ಪಿಕೊಂಡಿದ್ದಾರೆ.