ಕಾಂಗ್ರೆಸ್‌ ದಾಖಲಿಸಿರುವ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ರದ್ದು..!

geetha

ಭಾನುವಾರ, 25 ಫೆಬ್ರವರಿ 2024 (10:33 IST)
ಬೆಂಗಳೂರು- ಬಿಜೆಪಿ ವಿರುದ್ಧ ಕಾಂಗ್ರೆಸ್‌ ದಾಖಲಿಸಿರುವ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಯೊಂದನ್ನು ರದ್ದುಪಡಿಸಲು ಸ್ಪಷ್ಟವಾಗಿ ನಿರಾಕರಿಸಿರುವ ಹೈಕೋರ್ಟ್‌ ವ್ಯಕ್ತಿಗೆ ಮಾನ ಎಷ್ಟು ಮುಖ್ಯವೋ ರಾಜಕೀಯ ಪಕ್ಷಗಳಿಗೂ ಅಷ್ಟೇ ಮುಖ್ಯ ಎಂಬ ಮಹತ್ವದ ತೀರ್ಪು ಪ್ರಕಟಿಸಿದೆ.ಈ ಸಂಬಂಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್‌ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು, 'ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠ'ದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರು ವಜಾಗೊಳಿಸಿದ್ದಾರೆ.
 
ಭಾರತೀಯ ದಂಡ ಸಂಹಿತೆ-1860ರ ಐಪಿಸಿ ಕಲಂ 499 ಮತ್ತು 500ರಲ್ಲಿ 'ಯಾರೇ ಇರಲಿ' ಎಂಬ ಪದವು ಸೂಚ್ಯವಾಗಿ ಸಂಘವನ್ನೂ ವ್ಯಕ್ತಿ ಎಂದೇ ವಿಶಾಲ ಅರ್ಥದಲ್ಲಿ ಒಳಗೆಳೆದುಕೊಂಡು ಗಮನಿಸುತ್ತದೆ. ಅಂತೆಯೇ, ಸಾಮಾನ್ಯ ವ್ಯಾಖ್ಯಾನ ಅಧಿನಿಯಮ-1897ರ ಅಡಿಯಲ್ಲೂ ರಾಜಕೀಯ ಪಕ್ಷಗಳನ್ನು ಕಾನೂನು ವ್ಯಕ್ತಿ ಎಂದೇ ಅರ್ಥೈಸಲಾಗುತ್ತದೆ. ಇಂತಹ ಕಾನೂನು ವ್ಯಕ್ತಿ ಎಂಬ ಪದದ ವ್ಯಾಪ್ತಿಗೆ ಸರ್ಕಾರಗಳು, ಕಂಪನಿಗಳು, ದೈವತಗಳು, ಕಾರ್ಮಿಕ ಸಂಘಗಳು ಸೇರ್ಪಡೆಯಾಗುತ್ತವೆ' ಎಂದು ನ್ಯಾಯಪೀಠ ವಿವರಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ