ಹಿಂದಿನ ಸರ್ಕಾರದ ತನಿಖಾದೇಶವನ್ನು ಹಾಲಿ ಸರ್ಕಾರ ಹಿಂಪಡೆಯುವಂತಿಲ್ಲ..!

geetha

ಸೋಮವಾರ, 8 ಜನವರಿ 2024 (17:41 IST)
ಬೆಂಗಳೂರು: ಭ್ರಷ್ಟಾಚಾರ, ಹಗರಣಗಳಿಗೆ ಸಂಬಂಧಿಸಿದಂತೆ ಯಾವುದೇ ಪಕ್ಷದ ಸರ್ಕಾರ ನೀಡಿದ್ದ ತನಿಖೆಯ ಆದೇಶವನ್ನು ಆನಂತರ ಬಂದ ಸರ್ಕಾರ ಹಿಂಪಡೆಯುವಂತಿಲ್ಲ ಎಂದು ಹೈಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ. ನರೇಗಾ ಯೋಜನೆಯಲ್ಲಿ ನಕಲಿ ಬಿಲ್‌ ಸೃಷ್ಟಿಸಿ ಸರ್ಕಾರವನ್ನು ವಂಚಿಸಿದ್ದ ಆರೋಪ ಹೊಂದಿದ್ದ  ಗದಗ ಜಿಲ್ಲೆಯ ಕೃಷಿ ಸಹಾಯಕ ನಿರ್ದೇಶಕ ಮಲ್ಲಯ್ಯ ಕೊರವನವರ್‌ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌ ಈ ಆದೇಶ ನೀಡಿದೆ. 
 
 2007-2014 ರ ಅವಧಿಯಲ್ಲಿ ನರೇಗಾ ಯೋಜನೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದ್ದು, ಈ ಕುರಿತು ತನಿಖೆಗೆ ಆದೇಶಿಸಲಾಗಿತ್ತು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ನ್ಯಾಯಪೀಠ ಈ ಅರ್ಜಿ ವಿಚಾರಣೆ ನಡೆಸಿತ್ತು. 
ವಿಚಾರಣೆ ಹಂತದಲ್ಲಿದ್ದ 2014 ರಲ್ಲಿ ಹೊರಡಿಸಿದ್ದ ಆದೇಶವನ್ನು 2023ರ ಮಾರ್ಚ್‌ ನಲ್ಲಿ ಬಿಜೆಪಿ ಸರ್ಕಾರ ಹಿಂಪಡೆಯಲು ಆದೇಶಿಸಿತ್ತು. ಆದರೆ ಸರ್ಕಾರ ಬದಲಾದರೆ ಆರೋಪ ಬದಲಾಗವುದಿಲ್ಲ ಎಂದು ನ್ಯಾಯಮೂರ್ತಿ ತನಿಖೆಯನ್ನು ಮುಂದುವರೆಸಲು ಆದೇಶಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ