ಪ್ರೀತಿಸಿದ ಜೋಡಿ ಮದುವೆಯಾದ ದಿನವೇ ಬೇರೆ ಬೇರೆ

ಬುಧವಾರ, 19 ಫೆಬ್ರವರಿ 2020 (19:25 IST)

ಪ್ರೀತಿಸಿ ಮದುವೆಯಾಗಿದ್ದ ಜೋಡಿಯೊಂದು ಮದುವೆಯಾದ ದಿನವೇ ಬೇರ್ಪಟ್ಟ ಘಟನೆ ನಡೆದಿದೆ.
 

ಸಂದೀಪ್ ಎಂಬಾತ ಯುವತಿಯೊಬ್ಬಳನ್ನು ಮೂರ್ನಾಲ್ಕು ವರ್ಷಗಳಿಂದ ಪ್ರೀತಿ ಮಾಡ್ತಿದ್ದನು. ಆದರೆ ಇವರ ಪ್ರೀತಿ ಹಾಗೂ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು.

ಹುಡುಗಿಯ ಮನೆಮಂದಿ ಸಂದೀಪ್ ವಿರುದ್ಧ ಕೇಸ್ ದಾಖಲು ಮಾಡಿದ್ರು. ಆ ಬಳಿಕ ಹುಡುಗಿ ಕೇಸ್ ವಾಪಸ್ ಪಡೆದು ಅಚ್ಚರಿ ಮೂಡಿಸಿದ್ದಳು.

ಹುಡುಗಿಯನ್ನು ಇದೇ ಕಾರಣಕ್ಕೆ ಮನೆಮಂದಿ ಮನೆಯಿಂದ ಹೊರಹಾಕಿದ್ದಾರೆ. ಆಗ ಹುಡುಗಿ ಸಂದೀಪ್ ಜೊತೆಗೆ ಹೋಗಿ ಮದುವೆ ಮಾಡಿಕೊಂಡಿದ್ದಾಳೆ. ಮದುವೆ ಆದ ದಿನವೇ ಹುಡುಗಿ ಮನಸ್ಸು ಬದಲಿಸಿದ್ದಾಳೆ. ಮದುವೆ ಬ್ರೇಕಪ್ ಮಾಡಿಕೊಂಡಿದ್ದಾಳೆ.

ಉತ್ತರಪ್ರದೇಶದ ಹಮೀರ್ ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ