ಶ್ರೀರಾಮ ಮಹಾದೇಗುಲ ನಿರ್ಮಾಣಕ್ಕೆ ಭಾಗವತ್ ಆಗ್ರಹ
ರಾಮಜನ್ಮಭೂಮಿಯ ವಿವಾದವನ್ನು ಪರಿಹರಿಸಿ ಶ್ರೀರಾಮ ಮಹಾದೇಗುಲ ನಿರ್ಮಿಸಲು ಅನುಕೂಲ ಮಾಡಿಕೊಡುವಂತೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆಗ್ರಹಿಸಿದ್ದಾರೆ.
ಶ್ರೀರಾಮ ದೇವಾಲಯ ನಿರ್ಮಾಣಕ್ಕೆಆಗ್ರಹ ಮಾಡಿರುವ ಅವರು, ರಾಮ ಜನ್ಮಭೂಮಿ ಆಂದೋಲನದ ಪಾಲುದಾರರಾಗಿರುವ ಶ್ರೀ ರಾಮನ ಜನ್ಮಸ್ಥಳದಲ್ಲಿ ದೇವಾಲಯವನ್ನು ಬೇಗನೆ ನಿರ್ಮಾಣ ಮಾಡಬೇಕು. ಈ ಕುರಿತು ಕೇಂದ್ರ ಸರಕಾರ ಶೀಘ್ರ ನಿರ್ಣಯ ಕೈಗೊಳ್ಳಬೇಕು ಎಂದಿದ್ದಾರೆ.
ಶ್ರೀರಾಮ ಮಹಾದೇಗುಲ ನಿರ್ಮಾಣ ಸಂಬಂಧ ಸರಕಾರ ಕಾನೂನನ್ನು ತರಬೇಕು. ಈ ವಿಷಯದಲ್ಲಿ ನಾವು ಸಂತರು ಮತ್ತು ಮಹಾತ್ಮರೊಂದಿಗೆ ಇದ್ದೇವೆ ಎಂದು ಅವರು ಹೇಳಿದ್ದಾರೆ.