ತಿರುವನಂತಪುರಂ: ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಕೆಲವರು ಅರ್ಧಕ್ಕೇ ವಾಪಸಾದ ಘಟನೆಯೂ ನಡೆದಿದೆ.
ದೇವಾಲಯ ಪ್ರವೇಶಿಸಲೆಂದು ಬಂದಿದ್ದ ಮಹಿಳಾ ಪತ್ರಕರ್ತರೊಬ್ಬರು ಪ್ರತಿಭಟನೆ ಕಾವು ಹೆಚ್ಚಿದ ಹಿನ್ನಲೆಯಲ್ಲಿ ಅರ್ಧಕ್ಕೇ ಯಾತ್ರೆ ಮೊಟಕುಗೊಳಿಸಿದ್ದಾರೆ. ತನ್ನಿಂದಾಗಿ ರಕ್ತಪಾತವಾಗುವುದು ಬೇಡ ಎಂಬ ಕಾರಣಕ್ಕೆ ಹೀಗೆ ಮಾಡಿರುವುದಾಗಿ ಬಳಿಕ ಅವರು ಸ್ಪಷ್ವನೆ ನೀಡಿದ್ದಾರೆ.
ಇನ್ನು, ವಿದೇಶೀ ಮಹಿಳಾ ಪತ್ರಕರ್ತೆಯೊಬ್ಬರು ಶಬರಿಮಲೆ ಬೆಟ್ಟ ಏರಲು ಮುಂದಾದಾಗ ಪ್ರತಿಭಟನಾಕಾರರು ಬೆದರಿಕೆ ಹಾಕಿದ ಘಟನೆಯೂ ನಡೆದಿದೆ. ಬಳಿಕ ಭದ್ರತಾ ಸಿಬ್ಬಂದಿಗೆ ಈಕೆಗೆ ಭದ್ರತೆ ಒದಗಿಸಿದ್ದಾರೆ. ಆದರೆ ಅಧಿಕೃತ ದಾಖಲೆ ಪ್ರಕಾರ ಇದುವರೆಗೆ ಯಾರೂ ಮಹಿಳೆಯರು ದೇವಾಲಯ ಪ್ರವೇಶ ಮಾಡಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.