ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಪೋಸ್ಟ್; ಸೈಬರ್ ಠಾಣೆಗೆ ದೂರು ನೀಡಿದ ಸತ್ಯಮೂರ್ತಿ
ಬುಧವಾರ, 3 ಅಕ್ಟೋಬರ್ 2018 (08:30 IST)
ಮೈಸೂರು : ಪ್ರಧಾನಿ ಮೋದಿ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸತ್ಯಮೂರ್ತಿ ಎಂಬುವವರು ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಫೇಸ್ಬುಕ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿಯಾಗಿ ಚಿತ್ರ ಸಂದೇಶಗಳು ಹರಿದಾಡುತ್ತಿವೆ. ಇದರಿಂದ ದೇಶಕ್ಕೇ ಅಪಮಾನವಾಗುತ್ತಿದೆ. ಮೆಸ್ಸೇಜ್, ವಿಡಿಯೋಗಳು, ಅನಿಮೇಷನ್ ಚಿತ್ರಗಳಲ್ಲಿ ಪ್ರಧಾನಿ ಮೋದಿಯನ್ನು ಅವಮಾನಿಸುವ ಯತ್ನ ನಡೆಸಿದ್ದಾರೆ
ಈ ರೀತಿಯಲ್ಲಿ ದೇಶದ ಉನ್ನತ ಸ್ನಾನದಲ್ಲಿರುವ ವ್ಯಕ್ತಿಗಳ ಚಾರಿತ್ರ್ಯ ವಧೆ ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಚಾಮರಾಜ ಕ್ಷೇತ್ರದ ಬಿಜೆಪಿ ಲೀಗಲ್ ಮತ್ತು ಪಾರ್ಲಿಮೆಂಟರಿ ಸೆಲ್ಕೋ ಕನ್ವೇಯರ್ ಸತ್ಯಮೂರ್ತಿ ಅವರು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.